ಭೋಪಾಲ್(ಏ.20): ಮುಂಬೈ ದಾಳಿಯ ಹುತಾತ್ಮ ಹೇಮಂತ್ ಕರ್ಕರೆ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಭೋಪಾಲ್ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್‌ಗೆ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿದೆ.

ಭೋಪಾಲ್ ಮತಕ್ಷೇತ್ರದ ಚುನಾವಣಾಧಿಕಾರಿ ನೀಡಿದ ಮಾಹಿತಿ ಆಧಾರದ ಮೇಲೆ ಸಾಧ್ವಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಜೈಲಿನಲ್ಲಿ ಹೇಮಂತ್ ಕರ್ಕರೆ ನನಗೆ ಕಿರುಕುಳ ನೀಡಿದ್ದು, ನನ್ನ ಶಾಪದಿಂದಲೇ ಕರ್ಕರೆ ಮುಂಬೈ ದಾಳಿಯಲ್ಲಿ ಬಲಿಯಾದರು ಎಂದು ಸಾಧ್ವಿ ವಿವಾದಾತ್ಮಕ ಹೇಳಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.