ನವದೆಹಲಿ (ಏ. 16):  ಡಿಎಂಕೆ ಅಭ್ಯರ್ಥಿಯೊಬ್ಬರ ಬಳಿ ಮತದಾರರಿಗೆ ಹಂಚಲು ಇಟ್ಟಿದ್ದ ಭಾರೀ ಪ್ರಮಾಣದ ಹಣ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ತಮಿಳುನಾಡಿನ ವೆಲ್ಲೂರು ಲೋಕಸಭಾ ಕ್ಷೇತ್ರದ ಲೋಕಸಭಾ ಚುನಾವಣೆಯನ್ನು  ಚುನಾವಣಾ ಆಯೋಗ ರದ್ದುಗೊಳಿಸಿದೆ. 

ಮೈಸೂರಿನಲ್ಲಿ ಒಂದಾಗ್ತಾರಾ ಒಕ್ಕಲಿಗರು-ಕುರುಬರು?

ಏ.10ರಂದು ಆದಾಯ ತೆರಿಗೆ ಇಲಾಖೆ ನೀಡಿದ್ದ ಮಾಹಿತಿ ಆಧರಿಸಿ ಆರೋಪಿತ ಅಭ್ಯರ್ಥಿ ಕಾಥಿರ್‌ ಆನಂದ್‌ ಹಾಗೂ ಇತರ ಇಬ್ಬರು ಡಿಎಂಕೆ ಕಾರ್ಯಕರ್ತರ ವಿರುದ್ಧ ಜಿಲ್ಲಾ ಪೊಲೀಸರು ದೂರು ದಾಖಲಿಸಿಕೊಂಡಿದ್ದರು.

ಆನಂದ್‌ ಅವರು ಡಿಎಂಕೆ ಮುಖಂಡ ದುರೈ ಮುರುಗನ್‌ ಅವರ ಮಗ. ತೆರಿಗೆ ಇಲಾಖೆ ಅಧಿಕಾರಿಗಳು ಮುರುಗನ್‌ ಅವರ ಮನೆಯ ಮೇಲೆ ದಾಳಿ ನಡೆಸಿ 10.50 ಲಕ್ಷ ರು. ವಶಪಡಿಸಿಕೊಂಡಿದ್ದರು. ಬಳಿಕ ಮರುದಿನ ಪಕ್ಷದ ಕಾರ್ಯಕರ್ತರೊಬ್ಬರಗೆ ಸೇರಿದ ಸಿಮೆಂಟ್‌ ಗೋಡೌನ್‌ನಲ್ಲಿ ಇಟ್ಟಿದ್ದ 11.53 ಕೋಟಿ ಅಕ್ರಮ ಹಣ ಪತ್ತೆಯಾಗಿತ್ತು. 

ವೆಲ್ಲೂರಿನಲ್ಲಿ ಇಂದು ಚುನಾವಣೆ ನಡೆಯಬೇಕಿತ್ತು. ಆದರೆ ಅಕ್ರಮ ಹಣ ಪತ್ತೆಯಾಗಿದ್ದರಿಂದ ಚುನಾವಣೆಯನ್ನು ರದ್ದುಗೊಳಿಸಲಾಗಿದೆ.