ಬೆಂಗಳೂರು[ಏ. 12] ರಿಯಾಲಿಟಿ ಶೋ ಮೂಲಕ ಕನ್ನಡಿಗರ ಮನಗೆದ್ದಿರುವ ಭರವಸೆಯ ಗಾಯಕ ಗಣೇಶ್ ಕಾರಂತ್ ಧ್ವನಿಯಲ್ಲಿ ಹಾಡು ರಿಂಗಣಿಸುತ್ತ ನಿಮ್ಮನ್ನು ವೋಟಿಂಗ್ ಬೂತ್ ನ ಕಡೆ ಮುಖ ಮಾಡುವಂತೆ ಮಾಡುತ್ತದೆ.

ಯೋಗರಾಜ ಭಟ್ಟರ ಗೀತೆಯೊಂದನ್ನು ಹೊಂದಾಣಿಕೆ ಮಾಡಿಕೊಂಡು ಕೀರ್ತಿ ನಾರಾಯಣ್ ಸಾಹಿತ್ಯ ಬರೆದಿದ್ದಾರೆ. ಮೊದಲೇ ಹೇಳಿದಂತೆ ಗಣೇಶ್ ಕಾರಂತ್ ಧ್ವನಿ ನೀಡಿದ್ದರೆ ವಿವೇಕ್ ಹೆಗಡೆ ಹಿತ್ಲಳ್ಳಿ ಸಂಕಲನ ಸೇರಿದಂತೆ ಜವಾಬ್ದಾರಿ ನಿರ್ವಹಿಸಿದ್ದಾರೆ.

ನಿಜಾಮಾಬಾದ್‌ನಲ್ಲಿ ಇವಿಎಂ ಬಳಕೆಯಲ್ಲಿ ಗಿನ್ನೆಸ್‌ ದಾಖಲೆ?

‘ನಾವು ದನ ಕಾಯೋರು’ ಹಾಡನ್ನು ಎಲೆಕ್ಷನ್ ಜಾಗೃತಿಗೆ ಬಳಸಿಕೊಂಡಿರುವ ಯುವ ಬಳಗಕ್ಕೆ ಒಂದು ಅಭಿನಂದನೆ ಹೇಳುತ್ತ ಮರೆಯದೇ ನಾವೇಲ್ಲರೂ ಓಟ್ ಮಾಡೋಣ...