ಎರಡನೇ ಹಂತದ ಮತದಾನ ಪ್ರಕ್ರಿಯೆಲ್ಲಿ ಭಾರತ ಬ್ಯುಸಿ| ಕರ್ನಾಟಕ ಸೇರಿದಂತೆ ದೇಶದ 11 ರಾಜ್ಯ ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಮತದಾನ| ಒಟ್ಟು 95 ಲೋಕಸಭಾ ಕ್ಷೇತ್ರಗಳಿಗೆ ಮತದಾನ| ಕಣದಲ್ಲಿದ್ದಾರೆ ಹಲವು ಪ್ರಮುಖ ಅಭ್ಯರ್ಥಿಗಳು|ಇದುವರೆಗೂ ಶೇ.10 ರಷ್ಟು ಮಾತ್ರ ಮತದಾನ| ಸಂಜೆ 6 ಗಂಟೆವರೆಗೂ ನಡೆಯಲಿದೆ ಮತದಾನ ಪ್ರಕ್ರಿಯೆ|
ನವದೆಹಲಿ(ಏ.18): 2019 ರ ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನ ಪ್ರಕ್ರಿಯೆ ಇಂದು ಆರಂಭವಾಗಿದ್ದು, ಕರ್ನಾಟಕವೂ ಸೇರಿದಂತೆ ದೇಶದ 11 ರಾಜ್ಯ ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ಒಟ್ಟು 95 ಲೋಕಸಭಾ ಕ್ಷೇತ್ರಗಳಿಗೆ ಮತದಾನ ಪ್ರಕ್ರಿಯೆ ಆರಂಭವಾಗಿದೆ.
ಬೆಳಿಗ್ಗೆ 11 ಗಂಟೆ ವರೆಗೆ ಒಟ್ಟಾರೆ ದೇಶದಲ್ಲಿ ಶೇ.10 ರಷ್ಟು ಮತದಾನವಾಗಿದ್ದು, ಸಾಯಂಕಾಲ 6 ಗಂಟೆವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ.
ಒಟ್ಟಾರೆ 95 ಲೋಕಸಭಾ ಕ್ಷೇತ್ರಗಳಲ್ಲಿ ನಡೆದ ಮತದಾನದ ಶೇಕಡಾವಾರು ಮಾಹಿತಿ:
ಅಸ್ಸಾಂ- ಶೇ.18.23
ಬಿಹಾರ-ಶೇ.12.55
ಛತ್ತೀಸ್ ಘಡ: ಶೇ.14.18
ಜಮ್ಮು-ಕಾಶ್ಮೀರ- ಶೇ.5.86
ಕರ್ನಾಟಕ-ಶೇ.7.74
ಮಣಿಪುರ್-ಶೇ.32.18
ಒಡಿಶಾ-ಶೇ.9.01
ತಮಿಳುನಾಡು-ಶೇ.9.17
ಉತ್ತರ ಪ್ರದೇಶ-ಶೇ.12.84
ಪಶ್ಚಿಮ ಬಂಗಾಳ-ಶೇ.16.77
ಪಾಂಡಿಚೆರಿ-ಶೇ.12.83
ಪ.ಬಂಗಾಳದಲ್ಲಿ ಹಿಂಸಾಚಾರದ ಕುರಿತು ವರದಿಯಾಗಿದೆ. ರಾಯಗಂಜ್ ಲೋಕಸಭಾ ಕ್ಷೇತ್ರದ ಪಟಾಗೋರಾದಲ್ಲಿ ಮತದಾನ ಮಾಡಲು ಬಂದಿದ್ದ ಸಿಪಿಎಂ ಅಭ್ಯರ್ಥಿ ಮೊಹ್ಮದ್ ಸಲೀಂ ಅವರ ಕಾರಿನ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡಿಸಿದ್ದಾರೆ.
ತಮಿಳುನಾಡು ಮತ್ತು ಬಿಹಾರದಲ್ಲಿ ಇವಿಎಂ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಂಡು ಬಂದ ಕುರಿತು ವರದಿಯಾಗಿದೆ.
