ಮತಗಟ್ಟೆ ಬಳಿ ಮತದಾರು ಮೊಬೈಲ್ ಒಯ್ಯಂಗಿಲ್ಲ| ಚುನಾವಣಾ ಆಯೋಗದಿಂದ ಕಟ್ಟುನಿಟ್ಟಿನ ಸೂಚನೆ| ಮತಗಟ್ಟೆ ಅಧಿಕಾರಿಗಳನ್ನ ಹೊರತುಪಡಿಸಿ ಉಳಿದವರು ಮೊಬೈಲ್ ಬಳಸುವಂತಿಲ್ಲ| ಚುನಾವಣಾಧಿಕಾರಿ ಎನ್. ಮಂಜುನಾಥ ಪ್ರಸಾದ್ ಮಾಹಿತಿ| ಕೇಂದ್ರ ಚುನಾವಣಾ ಆಯೋಗದಿಂದ ಸೂಚನೆ ಹಿನ್ನೆಲೆ|
ಬೆಂಗಳೂರು(ಏ.14): ಲೋಕಸಭೆ ಚುನಾವಣೆಗೆ ರಾಜ್ಯದಲ್ಲಿ ಏ.18ರಂದು ನಡೆಯಲಿರುವ ಮತದಾನದ ವೇಳೆ ಮತದಾರರು ಮತಗಟ್ಟೆಗಳಿಗೆ ಮೊಬೈಲ್ ತರದಂತೆ ಚುನಾವಣಾ ಆಯೋಗ ತಿಳಿಸಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಚುನಾವಣಾ ಕರ್ತವ್ಯದ ಸಿಬ್ಬಂದಿ ಹೊರತುಪಡಿಸಿ ಮತಗಟ್ಟೆಯ 100 ಮೀಟರ್ ವ್ಯಾಪ್ತಿಯಲ್ಲಿ ಸಾರ್ವಜನಿಕರು ಮೊಬೈಲ್ ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಚುನಾವಣಾಧಿಕಾರಿ ಎನ್. ಮಂಜುನಾಥ ಪ್ರಸಾದ್, ಕೇಂದ್ರ ಚುನಾವಣಾ ಆಯೋಗದ ಸೂಚನೆ ಇರುವ ಹಿನ್ನೆಲೆಯಲ್ಲಿ ಆದೇಶ ಜಾರಿಗೆ ತರಲಾಗುತ್ತಿದೆ ಎಂಧು ಸ್ಪಷ್ಟಪಡಿಸಿದರು.
