ಬಿಜೆಪಿ 16ನೇ ಪಟ್ಟಿ ಘೋಷಣೆ| ಸೋನಿಯಾರನ್ನು ಎದುರಿಸಲು ಬಿಜೆಪಿ ಅಭ್ಯರ್ಥಿ ಫಿಕ್ಸ್|

ನವದೆಹಲಿ[ಏ.03]: ಬಿಜೆಪಿಯು 6 ಅಭ್ಯರ್ಥಿಗಳ 16ನೇ ಪಟ್ಟಿ ಜಾರಿಗೊಳಿಸಿದೆ. ಬಿಜೆಪಿಯು ಈಶಾನ್ಯ ಮುಂಬೈನಲ್ಲಿ ಬಿಜೆಪಿಯ ಹಾಲಿ ಸಂಸದ ಕಿರಿತ್ ಸೋಮಯ್ಯರ ಟಿಕೆಟ್ ತಪ್ಪಿದೆ. ಕಿರತ್ ಸೋಮಯ್ಯರ ಬದಲು ಮನೋಜ್ ಕೋಟಕ್ ರಿಗೆ ಟಿಕೆಟ್ ನೀಡಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆ ಕಿರಿತ್ ರನ್ನು ವಿರೋಧಿಸಿದೆ ಎಂಬುವುದು ಗಮನಾರ್ಹ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
Scroll to load tweet…

ಇನ್ನು ಅತ್ತ ರಾಯ್ ಬರೇಲಿನಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಬಿಜೆಪಿಯು ದಿನೇಶ್ ಪ್ರತಾಪ್ ಸಿಂಗ್ ರನ್ನು ಅಭ್ಯರ್ಥಿಯಾಗಿ ಘೋಷಿಸಿದೆ. ಮೈನ್ ಪುರಿಯಲ್ಲಿ ಸಮಾಜವಾದಿ ಪಕ್ಷದ ದಿಗ್ಗಜ ನಾಯಕ ಮುಲಾಯಂ ಸಿಂಗ್ ಯಾದವ್ ವಿರುದ್ಧ ಪ್ರೇಮ್ ಸಿಂಗ್ ಶಕ್ಯಾರನ್ನು ಕಣಕ್ಕಿಳಿಸಿದೆ. ಅಲ್ಲದೇ ಮುಲಾಯಂ ಯಾದವ್ ಪುತ್ರ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ವಿರುದ್ಧ ಅಜಂಗಡ ಕ್ಷೇತ್ರದಿಂದ ಭೋಜ್ಪುರಿ ಸೂಪರ್ ಸ್ಟಾರ್ ದಿನೇಶ್ ಲಾಲ್ ಯಾದವ್ 'ನಿರ್ಹುವಾ'ರಿಗೆ ಟಿಕೆಟ್ ನೀಡಿದೆ.