ಲೋಕಸಭಾ ಚುನಾವಣೆಯ ಈ ಸಂದರ್ಭದಲ್ಲಿ ವಿವಿಧ ಪಕ್ಷಗಳ ನಾಯಕರ ನಡುವೆ ವಾಕ್ಸಮರ ಜೋರಾಗಿದೆ. ಸಚಿವೆ ಜಯಮಾಲ ವಿರುದ್ಧ ಗರಂ ಆಗಿರುವ ಸಿಟಿ ರವಿ ವಾಗ್ದಾಳಿ ನಡೆಸಿದ್ದಾರೆ. 

ದಾವ​ಣ​ಗೆರೆ: ಸಿ.ಟಿ.ರವಿ ಮಹಿಳೆಯರ ಬಗ್ಗೆ ಕೀಳು ಮಟ್ಟದ ಹೇಳಿಕೆ ನೀಡಿದ್ದಾರೆ ಎಂಬ ಸಚಿವೆ ಜಯಮಾಲಾ ಆರೋಪಕ್ಕೆ ತಿರುಗೇಟು ನೀಡಿರುವ ಶಾಸಕ ಸಿ.ಟಿ.ರವಿ, ಜಯಮಾಲಾ ಮೊದಲು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಸಂಸ್ಕಾರ ಕಲಿಸಲಿ ಎಂದು ಹೇಳಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಗ​ರ​ದಲ್ಲಿ ಬುಧ​ವಾರ ಸುದ್ದಿ​ಗೋ​ಷ್ಟಿ​ಯಲ್ಲಿ ಮಾತ​ನಾ​ಡಿದ ಅವರು, ಉಂಡ ಮನೆಗೆ ದ್ರೋಹ ಬಗೆ​ದ​ವ​ರನ್ನು ಏನಂತಾ​ರೆ ಎಂಬು​ದಾಗಿ ನಾನು ಪ್ರಶ್ನಿ​ಸಿ​ದ್ದಕ್ಕೆ ಮಂಡ್ಯದ ಜನರೇ ಉತ್ತ​ರಿ​ಸಿದ್ದ ಪದ ಅದಾ​ಗಿತ್ತೇ ಹೊರತು, ನನ್ನಿಂದ ಬಂದ ಮಾತು ಅದಾಗಿ​ರ​ಲಿಲ್ಲ. ತಾಯಿ ಸಂಸ್ಕಾರ, ಸಾರ್ವ​ಜ​ನಿಕ ಸಭ್ಯತೆ ಅಂತ​ಹ​ದ್ದ​ನ್ನೆಲ್ಲಾ ನನಗೆ ಕಲಿ​ಸಿ​ಕೊ​ಟ್ಟಿಲ್ಲ. 

ಹೆಣ್ಣು ಮಕ್ಕಳು, ತಾಯಂದಿ​ರ ಬಗ್ಗೆ ಅಪಾರ ಗೌರ​ವ​ ಹೊಂದಿ​ರು​ವ​ವನು ನಾನು ಎಂದು ಅವರು ಸಚಿವೆ ಜಯ​ಮಾಲ ಟೀಕೆಗೆ ಪ್ರತಿ​ಕ್ರಿ​ಯಿ​ಸಿ​ದರು. ಮಹಿ​ಳೆ​ಯರ ಬಗ್ಗೆ ಸಚಿವೆ ಜಯ​ಮಾ​ಲಾ​ರಿಗೆ ಅಷ್ಟೊಂದು ಕಾಳಜಿ ಇದ್ದರೆ ರೈತ ಮಹಿ​ಳೆಗೆ ಇಷ್ಟುದಿನ ಎಲ್ಲಿ ಮಲ​ಗಿದ್ದೆ ಎಂದು ಕೇಳಿದ, ಸುಮ​ಲತಾ ಅಂಬ​ರೀಶ್‌ಗೆ ಇನ್ನಿ​ಲ್ಲದ ಕಾಟ ಕೊಟ್ಟಸಿಎಂ ಕು​ಮಾ​ರ​ಸ್ವಾ​ಮಿಗೆ ಸಂಸ್ಕಾರ ಕಲಿ​ಸಲಿ ಎಂದು ಸಲಹೆ ನೀಡಿದ್ದಾರೆ.