ಶ್ರೀನಗರ(ಏ.20): ಯೋಧರೇ ಹಾಗೆ. ಎಂತಹ ವಿಷಮ ಪರಿಸ್ಥಿತಿಯನ್ನೂ ನಿಭಾಯಿಸಲು ಅವರು ಸರ್ವ ಸನ್ನದ್ಧರಾಗಿರುತ್ತಾರೆ. ಎಲ್ಲವನ್ನೂ ಬಲ್ಲ, ಎಲ್ಲವನ್ನೂ ನಿಭಾಯಿಸುವ ಚಾಣಾಕ್ಷ ಮಾತ್ರ ಸಮವಸ್ತ್ರ ಧರಿಸಲು ಸಾಧ್ಯ.

ಅದರಂತೆ ಮತದಾನ ಸಂದರ್ಭದಲ್ಲಿ ಹೃಧಯಾಘಾತಕ್ಕೀಡಾದ ಚುನಾವಣಾಧಿಕಾರಿಗೆ ದೂರವಾಣಿ ಮೂಲಕ ವೈದ್ಯರೊಂದಿಗೆ ಮಾತನಾಡಿ, ಅವರ ಸಲಹೆಯಂತೆ ಪ್ರಥಮ ಚಿಕಿತ್ಸೆ ನೀಡಿ CRPF ಯೋಧನೋರ್ವ ಜೀವದಾನ ಮಾಡಿದ್ದಾರೆ.

ಇಲ್ಲಿನ ಬಚ್ಪೋರಾದಲ್ಲಿದ್ದ ಮತಗಟ್ಟೆಯಲ್ಲಿ ಕರ್ತವ್ಯ ನಿರತರಾಗಿದ್ದ ಸುರೀಂದರ್ ಕುಮಾರ್, ಮತದಾನದ ವೇಳೆಯೇ ಹೃದಯಘಾತಕ್ಕೀಡಾದ ಚುನಾವಣಾಧಿಕಾರಿ ಅಶಾನ್-ಉಲ್-ಹಕ್ ಅವರಿಗೆ ವೈದ್ಯರ ಸಲಹೆಯಂತೆ ಪ್ರಥಮ ಚಿಕಿತ್ಸೆ ನೀಡಿ ಜೀವ ಉಳಿಸಿದ್ದಾರೆ.

ಏಕಾಏಕಿ ಹೃದಯಾಘಾತಕ್ಕೀಡಾದ ಅಶಾನ್-ಉಲ್-ಹಕ್ ಅವರನ್ನು ಸ್ಥಳದಲ್ಲೇ ಇದ್ದ ಆಂಬುಲೆನ್ಸ್ ಗೆ ಕರೆದೊಯ್ದ ಸುರೀಂದರ್, ಕೂಡಲೇ CRPF ವೈದ್ಯ ಡಾ. ಸುನೀದ್ ಖಾನ್ ಅವರಿಗೆ ಫೋನ್ ಮಾಡಿ ಸಲಹೆ ಪಡೆದಿದ್ದಾರೆ.

ಡಾ. ಖಾನ್ ಸಲಹೆ ಪಾಲಿಸಿದ ಸುರೀಂದರ್ ಚುನಾವಣಾಧಿಕಾರಿ ಅಶಾನ್ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಜೀವ ಉಳಿಸಿದ್ದಾರೆ. ಯೋಧ ಸುರೀಂದರ್ ಸಮಯಪ್ರಜ್ಞೆಗೆ ಎಲ್ಲೆಡೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂಧು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28.