ಬೆಂಗಳೂರು (ಮಾ. 25):  ರಾಜ್ಯದಲ್ಲಿ ಎರಡು ಹಂತಗಳಲ್ಲಿ ನಡೆಯಲಿರುವ ಹಾಗೂ ತೀವ್ರ ಕುತೂಹಲ ಕೆರಳಿಸಿರುವ ಲೋಕಸಭೆ ಮಹಾಸಮರಕ್ಕೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಮೂರೂ ರಾಜಕೀಯ ಪಕ್ಷಗಳು ಬಹುತೇಕ ಮುಕ್ತಾಯಗೊಳಿಸುವ ಹಂತಕ್ಕೆ ತಲುಪಿವೆ.

2 ದಿನವಲ್ಲ, 2 ನಿಮಿಷವೂ ಅಂಬರೀಶ್ ಹೆಸರು ಬಳಸಲ್ಲ: ಸಿಎಂ ಕುಮಾರಸ್ವಾಮಿ

9 ಲೋಕಸಭಾ ಕ್ಷೇತ್ರಗಳನ್ನು ಹೊರತುಪಡಿಸಿ, ಉಳಿದ 19 ಕ್ಷೇತ್ರಗಳಲ್ಲಿ ಸಮರಕ್ಕೆ ರಾಜಕೀಯ ಪಕ್ಷಗಳ ಸೇನಾನಿಗಳು ಸಜ್ಜಾಗಿದ್ದಾರೆ. ತುಮಕೂರಿನಲ್ಲಿ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಬಿಜೆಪಿಯಿಂದ ಮಾಜಿ ಸಂಸದ ಜಿ. ಎಸ್ ಬಸವರಾಜು ಹಾಗೂ ಬಂಡಾಯ ಅಭ್ಯರ್ಥಿಯಾಗಿ ಮುದ್ದಹನುಮೇಗೌಡ ಸ್ಪರ್ಧಿಸಲು ಸಜ್ಜಾಗಿದ್ದಾರೆ.  ತುಮಕೂರಿನ ಸಂಪೂರ್ಣ ಚಿತ್ರಣ ಇಲ್ಲಿದೆ. 

8ನೇ ಪಟ್ಟಿಯಲ್ಲೂ ಇಲ್ಲ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ : ನಿಗೂಢ ನಡೆ

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಸ್ಪರ್ಧಿಸಿರುವ ಕ್ಷೇತ್ರದಲ್ಲಿ ಜಿದ್ದಾಜಿದ್ದಿ ಪೈಪೋಟಿ ಸಾಧ್ಯತೆ ಇದೆ. ಬಿಜೆಪಿಯಿಂದ ಮಾಜಿ ಸಂಸದ ಜಿ. ಎಸ್.ಬಸವರಾಜು ಸ್ಪರ್ಧಿಸಿದ್ದಾರೆ. ಕಾಂಗ್ರೆಸ್‌ನಿಂದ ಟಿಕೆಟ್ ವಂಚಿತ ಎಸ್.ಪಿ. ಮುದ್ದಹನುಮೇಗೌಡರು ಬಂಡಾಯ ಅಭ್ಯರ್ಥಿಯಾಗಲು ಸಜ್ಜಾಗಿದ್ದಾರೆ. ದೇವೇಗೌಡ- ಬಸವರಾಜುಗೆ ಮುದ್ದಹನುಮೇಗೌಡ ತೊಡರುಗಾಲು ಆಗುವ ಸಾಧ್ಯತೆ ಹೆಚ್ಚಿದೆ. ಅಲ್ಲದೇ ಹೇಮಾವತಿ ನೀರಿನ ವಿಷಯದಲ್ಲಿ ದೇವೇಗೌಡ ಕುಟುಂಬ ಅನ್ಯಾಯ ಮಾಡಿದೆ ಎಂಬುದನ್ನು ಅಸ್ತ್ರವಾಗಿ ಬಿಜೆಪಿ ಬಳಸಲು ತೀರ್ಮಾನಿಸಿದೆ. ಗೆದ್ದ ಕ್ಷೇತ್ರ ಜೆಡಿಎಸ್‌ಗೆ ಕೊಟ್ಟಿದ್ದಕ್ಕೆ ಕಾಂಗ್ರೆಸ್ಸಲ್ಲಿ ಸಿಟ್ಟಿದೆ.