17ನೇ ಲೋಕಸಭಾ ಚುನಾವಣೆ ನಿನ್ನೆ ಸಂಪನ್ನಗೊಂಡಿದೆ. ಆದ್ರೆ ಕೊನೆ ಹಂತದ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿದ್ದ ವ್ಯಕ್ತಿಯನ್ನು ಸಚಿವರ ಆಪ್ತನೊಬ್ಬ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ.

ಇಂದೋರ್, [ಮೇ.20]: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿದ 60 ವರ್ಷದ ವ್ಯಕ್ತಿಯನ್ನು ಕಾಂಗ್ರೆಸ್ ಬೆಂಬಲಿಗ ಶೂಟ್ ಮಾಡಿ ಕೊಂದಿರುವ ಘಟನೆ ಮಧ್ಯ ಪ್ರದೇಶದ ಪಾಲಿಯಾದಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಧ್ಯಪ್ರದೇಶದ ಸಚಿವರೊಬ್ಬರ ಆಪ್ತನಾಗಿರುವ ಅರುಣ್ ಶರ್ಮಾ ಬಿಜೆಪಿಗೆ ಮತ ಹಾಕಿದ್ದ ಸಲೂನ್ ಮಾಲೀಕ ನೇಮಿಚಂದ ತನ್ವಾರ್ ನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿನ್ನೆ [ಭಾನುವಾರ] ನಡೆದ ಲೋಕಸಭೆ ಚುನಾವಣೆಯ ಕೊನೆಯ ಹಂತದ [7ನೇ] ಮತದಾನದಲ್ಲಿ ನೇಮಿಚಂದ್ ಬಿಜೆಪಿಗೆ ಮತ ಹಾಕಿದ್ದರು, ಇದರಿಂದ ಕುಪಿತಗೊಂಡ ಅರುಣ್ ಶರ್ಮಾ, ಸಂಜೆ ನೇಮಿಚಂದ್ ಮನೆಗೆ ಹೋಗಿ ಕಂಟ್ರಿ ಮೇಡ್ ಪಿಸ್ತೂಲ್ ನಿಂದ ಗುಂಡು ಹಾರಿಸಿ ಕೊಂದಿದ್ದಾನೆ. 

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.