ಮಂಡ್ಯ[ಏ. 28] ಮಂಡ್ಯಲೋಕಸಭಾ ಕಣದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವಿನ ನಿರೀಕ್ಷೆಯಲ್ಲಿರುವ ಸುಮಲತಾ ಅಂಬರೀಶ್ ಮತ್ತು ಕಾಂಗ್ರೆಸ್ ನ ರೆಬಲ್ ಲೀಡರ್ ಚೆಲುವರಾಯಸ್ವಾಮಿ ಪರಸ್ಪರ ಭೇಟಿಯಾಗುವ ಸಂದರ್ಭ ಎದುರಾಗಿತ್ತು.

ಭೇಟಿ ನಂತರ ಮಾತನಾಡಿದ ಸುಮಲತಾ, ರಾಜಕೀಯವಾಗಿ ಏನೂ ಮಾತಾಡಿಲ್ಲ. ಚುನಾವಣೆ ಮುಗಿದಿದೆ ಸ್ವಲ್ಪ ರೆಸ್ಟ್ ಮಾಡಿ ಅಂದ್ರು, ಚುನಾವಣೆಗೂ ಮುನ್ನ ಚರ್ಚೆ ಮಾಡಿದ್ವಿ. ಜನರಲ್ ಡಿಸ್ಕಶನ್ ಮಾಡಿದ್ವಿ. ಚುನಾವಣೆ ಬಗ್ಗೆ ಅಷ್ಟು ಡೀಪಾಗಿ ಏನೂ ಚರ್ಚೆ ಮಾಡಿಲ್ಲ, ಇವಾಗ ನನಗೆ ವಿಶ್ರಾಂತಿ ಸಮಯ. ಎಂದರು.

ದರ್ಶನ್ ಮಾತಿಗೆ ಮೆಚ್ಚುಗೆ ಸೂಚಿಸಿದ ಸುಮಲತಾ, ದರ್ಶನ್ ಹೇಳಿದ್ದು ತುಂಬಾ ಒಳ್ಳೆ ಸ್ಟೇಟ್ಮೆಂಟ್. ನನ್ನ ಮನಸ್ಸಲ್ಲಿರೋದು ಅದೇ ವಿಚಾರ. ಅವರ ಸ್ಟೇಟ್ಮೆಂಟನ್ನ ಅಪ್ರಿಸಿಯೇಟ್ ಮಾಡಬೇಕು. ಯಾವುದೇ ಸರ್ಕಾರ ಇರಲಿ. ಅದನ್ನ ಫಾಲೋ ಮಾಡೋದು ಒಳ್ಳೆಯದು ಎಂದರು.

ಚಲುವರಾಯಸ್ವಾಮಿ ಮಾತನಾಡಿ, ಸ್ವಾಭಿಮಾನದ ಗೆಲುವು ಅಂತ ಎಲ್ಲಾ ಸರ್ವೆ ರಿಪೋರ್ಟ್ ನಮ್ಮ ಪರ ಬಂದಿದೆ. ಎಲ್ಲರೂ ಅವರಿಗೆ ಬೇಕಾದ ಹಾಗೇ ಅಭಿಪ್ರಾಯ ಮೂಡಿಸಿಕೊಳ್ತಾರೆ. ಸರ್ಕಾರ‌ ಇದ್ದು, ಸಚಿವರು, ಶಾಸಕರು, ಮುಖ್ಯಮಂತ್ರಿ, ಮಾಜಿ ಪ್ರಧಾನಿ, ಮುಖ್ಯಮಂತ್ರಿ ಕುಟುಂಬ ಇಷ್ಟು ಜನ ಮಂಡ್ಯದಲ್ಲಿ ಕೆಲಸಮಾಡಿದ್ದಾರೆ. ಇಷ್ಟು ಜನ ಕೆಲಸ‌ಮಾಡಿ ರಿಸಲ್ಟ್ ಬರೋ ಮೊದಲೆ ಗೆಲವು ನಮ್ಮದು ಅಂದ್ರೆ ಯಾರು ಒಪ್ಪುತ್ತಾರೆ? ಎಂದು ಪ್ರಶ್ನೆ ಮಾಡಿದರು.

ಮಂಡ್ಯ ಜನ ತೀರ್ಮಾನ ಮಾಡಿ ಆಗಿದೆ, ಅದರ ಪ್ರಕಟಣೆಗಾಗಿ ಕಾಯುತ್ತಿದ್ದೇವೆ. ಅಲ್ಲಿವರೆಗೂ ಕಾಯುವ ತಾಳ್ಮೆಯನ್ನ ಜಿಲ್ಲೆಯ ಜನರು ನಮಗೆ ಕಲಿಸಿದ್ದಾರೆ. ಕುಮಾರಸ್ವಾಮಿ ನೇತೃತ್ವದಲ್ಲಿ ಅವರ ಟೀಂ ದುಡಿದಿದ್ರೆ, ಸುಮಲತಾ ಪರವಾಗಿ ದರ್ಶನ್,ಯಶ್ ಸೇರಿದಂತೆ ‌ಜಿಲ್ಲೆಯ ಹಲವು ಸಂಘಟನೆಗಳು ಎಲ್ಲಾ ವರ್ಗದವರು ದುಡಿದಿದ್ದಾರೆ ಎಂದರು.

ಸುಮಲತಾ ಅಂಬರೀಶ್ ಲೈಫಲ್ಲಿ ಮೇ ತಿಂಗಳು ಫುಲ್ ಸ್ಪೆಷಲ್!

ಸುಮಲತಾ, ನಿಖಿಲ್ ಪರ ಯಾರು ಬೆಟ್ ಕಟ್ಟಬಾರದು. ಸೋತ್ರೆ ನಮ್ಮ ಜಿಲ್ಲೆಯವರಿಗೆ ನಷ್ಟ ಆಗುತ್ತದೆ. ಉಭಯ ಅಭ್ಯರ್ಥಿಗಳು ಬೆಟ್ಟಿಂಗ್ ಬೇಡ ಎಂದು ಮನವಿ ಮಾಡಿದ್ದಾರೆ. ನಾನು ಮನವಿ ಮಾಡ್ತೇನೆ ಬೆಟ್ಟಿಂಗ್ ಬೇಡ. ರಾಷ್ಟ್ರದ ಫಲಿತಾಂಶ, ಮಂಡ್ಯದ ಜಿಲ್ಲೆ ಫಲಿತಾಂಶವೇ ಬೇರೆಯಾಗಲಿದೆ. ಎಲ್ಲಾ ಮಾಧ್ಯಮದವರು ಮಂಡ್ಯವನ್ನೇ ಹೆಚ್ಚು ತೋರಿಸಿದ್ದಾರೆ. ಈ ಶ್ರಮಕ್ಕೆ ಉತ್ತಮ ಫಲಿತಾಂಶ ಬಂದರೆ ಅರ್ಥ ಸಿಗುತ್ತದೆ ಎಂದರು.

ಮಂಡ್ಯ ಫಲಿತಾಂಶ ಸರ್ಕಾರದ ಮೇಲೆ ಪರಿಣಾಮ ಬೀರುವ ಬಗ್ಗೆ ನಾನು ಮಾತನಾಡಲ್ಲ. ಫಲಿತಾಂಶ ಬಂದಮೇಲೆ ನಾನು ವಿಶ್ಲೇಷಣೆ ಮಾಡ್ತೀನಿ. ದೊಡ್ಡವರ ಜೊತೆ ವಾದ ಮಾಡಲಿಕ್ಕೆ ಆಗುತ್ತದೆಯೇ? ಪುಟ್ಟರಾಜು ಅವ್ರು ನಿಖಿಲ್ ಸೋತರೆ ಅಲ್ಲ, ಎರಡುವರೆ ಲಕ್ಷ ಲೀಡ್ ನಿಂದ ಗೆಲ್ಲದಿದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದಿದ್ದಾರೆ ಎಂದು ಪರೋಕ್ಷವಾಗಿ ಪುಟ್ಟರಾಜುಗೆ ಟಾಂಗ್ ನೀಡಿದರು.