ನವದೆಹಲಿ, (ಮಾ.11): ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಚುನಾವಣಾ ಅಖಾಡಕ್ಕಿಳಿಸಲು ಕಾಂಗ್ರೆಸ್ ಭರ್ಜರಿ ತಯಾರಿ ನಡೆಸಿದೆ.

ಸಿಖ್ ಮತಗಳ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್, ಮನಮೋಹನ್ ಸಿಂಗ್ ಅವರನ್ನು ಪಂಜಾಬ್ ನ ಅಮೃತಸರ ಕ್ಷೇತ್ರದಿಂದ ಕಣಕ್ಕಿಳಿಸಲು ಚಿಂತನೆ ನಡೆಸಿದೆ.

ಆದ್ರೆ, ಈ ಬಗ್ಗೆ ಖುದ್ದು ಮನಮೋಹನ್ ಸಿಂಗ್ ಅವರು ಯಾವುದೇ ಪ್ರತಿಕ್ರಿಯಿಸದೇ ಇರುವುದು ಕಾಂಗ್ರೆಸ್‌ಗೆ ನಿರಾಸೆ ಮೂಡಿಸಿದೆ.  

 ಸಿಖ್ ಸಮುದಾಯದ ಹಿರಿಯ ನಾಯಕರಾಗಿರುವ ಮನಮೋಹನ್ ಸಿಂಗ್ ಅವರು ಈವರೆಗೂ ಮತದಾರರಿಂದ ಆಯ್ಕೆಯಾಗುವ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ.ಬದಲಾಗಿ ಬೇರೆ-ಬೇರೆ ರಾಜ್ಯಗಳ ಮೂಲಕ ರಾಜ್ಯಸಭೆಗೆ  ಆಯ್ಕೆಯಾಗಿದ್ದಾರೆ. 

 86 ವರ್ಷದ ಮನಮೋಹನ್ ಸಿಂಗ್ ಈ ಬಗ್ಗೆ ಆಸಕ್ತಿಯನ್ನೂ ತೋರಿಲ್ಲ, ಮನಮೋಹನ್‌ಸಿಂಗ್ ಅವರು 1991ರಿಂದ ರಾಜ್ಯಸಭೆಗೆ ಆಯ್ಕೆಯಾಗುತ್ತಾ ಬಂದಿದ್ದಾರೆ. 

ಕೊನೆಗಳಿಗೆಯಲ್ಲಿ ಮನಮೋಹನ್ ಸಿಂಗ್ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.