ಕೆ.ಆರ್‌. ನಗರ :  ಸುಮಲತಾ ಅಂಬರೀಷ್‌ ತಮ್ಮ ಪುತ್ರ ಅಭಿಷೇಕ್‌ರೊಂದಿಗೆ ಕೆ.ಆರ್‌.ನಗರ ಸೇರಿ ತಾಲೂಕಿನ ವಿವಿಧ ಗ್ರಾಮಗಳಿಗೆ ಆಗಮಿಸಿದಾಗ ಅವರನ್ನು ಸ್ವಾಗತಿಸಲು ಕಾಂಗ್ರೆಸ್‌ ಮುಖಂಡರ ದಂಡೇ ಹರಿದು ಬಂತು. ಮೈತ್ರಿ ಧರ್ಮ ಪಾಲನೆ ಮಾಡಬೇಕೆಂಬ ಎಚ್ಚರಿಕೆಗೆ ಯಾರೂ ಕಿವಿಗೊಡದಿದ್ದದ್ದು ಸ್ಪಷ್ಟವಾಯಿತು.

ಪಟ್ಟಣದ ಎಚ್‌.ಡಿ. ದೇವೇಗೌಡ ಸಮುದಾಯ ಭವನದಲ್ಲಿ ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ್ದ ಸಚಿವ ಸಾ.ರಾ. ಮಹೇಶ್‌, ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನವರು ಮೈತ್ರಿ ಧರ್ಮ ಪಾಲಿಸಿ ಜೆಡಿಎಸ್‌ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಅವರನ್ನು ಬೆಂಬಲಿಸಬೇಕು. 

ಇಲ್ಲದಿದ್ದರೆ ಮೈಸೂರಿನಲ್ಲಿ ಪ್ರತಿಫಲ ಅನುಭವಿಸಬೇಕಾಗುತ್ತದೆ ಎಂದಿದ್ದರು. ಆದರೆ ಅದನ್ನು ಕಾಂಗ್ರೆಸ್ಸಿಗರು ಗಂಭೀರವಾಗಿ ಪರಿಗಣಿಸಿದಂತೆ ಕಾಣಲಿಲ್ಲ.