ಕೊಡಗು, (ಏ.16): ವಿಯೆಟ್ನಾಂ ಕಾಳುಮೆಣಸು ಆಮದು ಮಾಡಿಕೊಂಡಿರುವಲ್ಲಿ ಪ್ರತಾಪ್ ಸಿಂಹ ಶಾಮೀಲಾಗಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಮಂಜುನಾಥ್ ಗಂಭೀರ ಆರೋಪ ಮಾಡಿದ್ದಾರೆ.

ಮಡಿಕೇರಿಯಲ್ಲಿ ಇಂದು (ಮಂಗಳವಾರ) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  'ಪ್ರತಾಪ್ ಸಿಂಹಗೆ ಕೊಡಗಿನ ಜನ ಯಾಕೆ ಓಟು ಹಾಕಬಾರದು ಅಂದ್ರೆ ಸ್ಪೈಸ್ ಬೋರ್ಡ್ ಸದಸ್ಯರಾಗಿದ್ದ ಪ್ರತಾಪ್ ಸಿಂಹ ಅವರು ಕೊಡಗಿನ ಕಾಳುಮೆಣಸಿಗೆ ನ್ಯಾಯ ಕೊಡಿಸಿಲ್ಲ. ವಿಯೆಟ್ನಾಂ ಕಾಳುಮೆಣಸು ಆಮದು ಮಾಡಿಕೊಂಡಿರುವಲ್ಲಿ ಪ್ರತಾಪ್ ಸಿಂಹ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.

ಚುನಾವಣೆ ಎದುರಿಸಲು ಆರ್ಥಿಕ ಸಂಕಷ್ಟದಲ್ಲಿದ್ದಾರಾ ಪ್ರತಾಪ್ ಸಿಂಹ?

ಯಾಕೆ ನಮ್ಮ ಅಭ್ಯರ್ಥಿ ವಿಜಯ ಶಂಕರ್‌ಗೆ ಮತ ಹಾಕ್ಬೇಕು ಅಂದ್ರೆ  ಸಿದ್ದರಾಮಯ್ಯರ ಅನ್ನದ ಋಣ, ರಾಹುಲ್ ಗಾಂಧಿ ಅವರ ರೈತರ ಬಗೆಗಿನ‌ ಕ್ರಾಂತಿಕಾರಿ ಯೋಜನೆ ಜೊತೆಗೆ ನಮ್ಮ ಅಭ್ಯರ್ಥಿ ವಿಜಯ ಶಂಕರ್‌ಗೆ ಕೊಡಗಿನ‌ ಸಮಸ್ಯೆಯ ಬಗ್ಗೆ ಅರಿವಿದೆ. ಹೀಗಾಗಿ ವಿಜಯ ಶಂಕರ್‌ಗೆ ಮತ ನೀಡಿ ರಾಹುಲ್ ಗಾಂಧಿ ಕೈ ಬಲಪಡಿಸಿ ಕೆ ಮಂಜುನಾಥ್ ಮನವಿ ಮಾಡಿಕೊಂಡರು

ಕೊಡಗು ಮೈಸೂರನ್ನು ಪ್ರತಿನಿಧಿಸಲು ಒಬ್ಬ ರೈತಪರ ನಾಯಕ ಬೇಕಾಗಿದೆ. ಹೀಗಾಗಿ ಕೊಡಗಿನ ಜನ ಪ್ರತಾಪ್ ಸಿಂಹಗೆ ಓಟು ಕೊಡಲ್ಲ, ವಿಜಯ ಶಂಕರ್ ಗೆಲ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದೇಶದಲ್ಲಿ ಏ.11ರಿಂದ ಮೇ.19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28.