ಶಿವಮೊಗ್ಗ, [ಏ.22]: ಮೋದಿಗೆ ಮಕ್ಕಳು ಇದ್ದಿದ್ದರೆ ಆತನಿಗೂ  ಬಿಜೆಪಿ ಟಿಕೇಟ್ ನೀಡಲಾಗುತ್ತಿತ್ತು ಎಂದು ಕಾಂಗ್ರೆಸ್ ಮುಖಂಡ ಬೇಳೂರು ಗೋಪಾಲಕೃಷ್ಣ ಲೇವಡಿ ಮಾಡಿದ್ದಾರೆ. 

 ಶಿವಮೊಗ್ಗ ಜಿಲ್ಲೆಯ ರಿಪ್ಪನ್ ಪೇಟೆಯಲ್ಲಿ ಭಾನುವಾರ ಮಧು ಬಂಗಾರಪ್ಪನವರ ಪರ ಮತ ಪ್ರಚಾರ ಸಭೆಯಲ್ಲಿ ಮಾತನಾಡಿ, ಕುಟುಂಬ ರಾಜಕಾರಣದ ಬಗ್ಗೆ ಬಿಜೆಪಿ  ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷವನ್ನ ಜರಿಯುತ್ತಾ ಬಂದಿದೆ. ಬಿಜೆಪಿಯೂ ಸಹ ಈ ಕುಟುಂಬ ರಾಜಕಾರಣದಿಂದ ಹೊರತಾಗಿಲ್ಲ ಎಂದು ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡ್ಡಿಯೂರಪ್ಪ ತನ್ನ ಮಗ ಬಿ.ವೈ.ರಾಘವೇಂದ್ರನಿಗೆ ಲೋಕಸಭಾ ಚುನಾವಣೆ ಸ್ಪರ್ಧಿಸಲು ಟಿಕೇಟ್ ನೀಡಿ ಅವರು ಕುಟುಂಬ ರಾಜಕಾರಣ ಮಾಡಲಿಲ್ಲವಾ? ಹಾಗೆ ಮೋದಿಗೂ ಮಕ್ಕಳಿದ್ದಿದ್ದರೆ ಅವರಿಗೂ ಟಿಕೇಟ್ ನೀಡಲಾಗುತ್ತಿತ್ತು. ಹಾಗಾಗಿ ಕುಟುಂಬ ರಾಜಕಾರಣ ಕೇವಲ ಒಂದು ಪಕ್ಷಕ್ಕೆ ಸೀಮಿತವಾಗದೆ ಎಲ್ಲಾ ಪಕ್ಷದಲ್ಲಿ ಇದೆ ಎಂದರು.

ಈ ಹಿಂದೆಯೂ ಪ್ರಧಾನಿ ಮೋದಿ ವಿರುದ್ದ ಗುಂಡಿಕ್ಕಿ ಕೊಲೆ ಮಾಡಬೇಕೆಂದು ಮಾತನಾಡಿ ನಂತರ ಕ್ಷಮೆ ಕೇಳಿದ್ದ ಬೇಳೂರು ಈಗ ಮೋದಿಗೆ ಮಕ್ಕಳಿದ್ದಿದ್ದರೆ ಅವರಿಗೂ ಟಿಕೇಟ್ ನೀಡಲಾಗುತ್ತಿತ್ತು ಎಂದರಿರುವುದು ಸಹ ವಿವಾದಕ್ಕೆ ಕಾರಣವಾಗಿದೆ. 

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂಧು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28