ನವದೆಹಲಿ(ಮೇ.09): INS ವಿರಾಟ್‌ನ್ನು ರಾಜೀವ್ ಗಾಂಧಿ ತಮ್ಮ ಫ್ಯಾಮಿಲಿ ಹಾಲಿಡೇಗಾಗಿ ಬಳಸುವ ಮೂಲಕ, ನೌಕಾಸೇನೆಯ ಹಡಗುಗಳನ್ನು ಟ್ಯಾಕ್ಸಿ ಮಾಡಿಕೊಂಡಿದ್ದರು ಎಂಬ ಪ್ರಧಾನಿ ಮೋದಿ ಆರೋಪಕ್ಕೆ ಕಾಂಗ್ರೆಸ್ ತಿರುಗೇಟು ನೀಡಿದೆ.

ಲೋಕಸಭೆ ಚುನಾವಣೆ ಪ್ರಚಾರಕ್ಕಾಗಿ ವಾಯುಸೇನೆಯು ಜೆಟ್ ವಿಮಾನಗಳನ್ನು, ಕೇವಲ 744 ರೂ.ಗೆ ಬಾಡಿಗೆ ಪಡೆಯುವ ಮೂಲಕ ಪ್ರಧಾನಿ ವಾಯುಸೇನೆಯ ಯುದ್ಧ ವಿಮಾನಗಳನ್ನು ಟ್ಯಾಕ್ಸಿ ಮಾಡಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ರಣದೀಪ್ ಸರ್ಜೆವಾಲಾ, ಪ್ರಧಾನಿ ಮೋದಿ ಅವರ ಸುಮಾರು 240 ಚುನಾವಣಾ ಪ್ರಚಾರಗಳಿಗಾಗಿ ವಾಯುಸೇನೆಯ ಜೆಟ್ ವಿಮಾನ ಬಳಕೆಗೆ ಬಿಜೆಪಿ ಕೇವಲ 1.4 ಕೋಟಿ ರೂ. ಪಾವತಿಸಿದೆ. ಜನೆವರಿ 15, 2019ರಲ್ಲಿ ಮೋದಿ ಮಾಡಿದ ಅನಧಿಕೃತ ಪ್ರವಾಸಕ್ಕೆ ಕೇವಲ 744 ರೂ. ಪಾವತಿಸಲಾಗಿದೆ ಎಂದು ಆರೋಪಿಸಿದರು.

ಇದೇ ವೇಳೆ ರಾಜೀವ್ ಗಾಂಧಿ ಸ್ವಂತಕ್ಕಾಗಿ INS ವಿರಾಟ್ ಬಳಸಿಲ್ಲ ಬದಲಾಗಿ ಯುದ್ಧ ನೌಕೆಗೆ ಅಧಿಕೃತ ಭೇಟಿ ನೀಡಿದ್ದರು ಎಂದು ನಿವೃತ್ತ ವೈಸ್ ಅಡ್ಮಿರಲ್ ವಿನೋದ್ ಪಸ್ರಿಚಾ ಹೇಳಿದ್ದನ್ನು ಕಾಂಗ್ರೆಸ್ ಪುನರುಚ್ಛಿಸಿದೆ. ಅಲ್ಲದೇ ರಾಜೀವ್ ಭೇಟಿಯ ಮಾಹಿತಿ ಇದ್ದ ನೌಕಾಸೇನಾಧಿಕಾರಿಗಳ ಮಾಹಿತಿ ನೀಡಿದೆ.

ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ