ಭೋಪಾಲ್ ಕಾಂಗ್ರೆಸ್ ಅಭ್ಯರ್ಥಿ ದಿಗ್ವಿಜಯ್ ಸಿಂಗ್ ಗೆಲುವಿಗಾಗಿ ಹಠಯೋಗ| ಭೋಪಾಲ್ ನಲ್ಲಿ ಸಾವಿರಾರು ನಾಗಾ ಸಾಧುಗಳಿಂದ ಹಠಯೋಗ| ಬಿಜೆಪಿ ಮಾಜಿ ಸಚಿವ ಕಂಪ್ಯೂಟರ್ ಬಾಬಾ ಭಾಗಿ| ರಾಮ ಮಂದಿರ ನಿರ್ಮಾಣ ಮಾಡದ ಮೋದಿಗೆ ವೋಟ್ ಇಲ್ಲ ಎಂದ ಕಂಪ್ಯೂಟರ್ ಬಾಬಾ|

ಭೋಪಾಲ್(ಮೇ.07): ಭೋಪಾಲ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ದಿಗ್ವಿಜಯ್ ಸಿಂಗ್ ಗೆಲುವಿಗಾಗಿ, ಸಾವಿರಾರು ನಾಗಾ ಸಾಧುಗಳು ಹಠ ಯೋಗ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
Scroll to load tweet…

ಭೋಪಾಲ್‌ನಲ್ಲಿ ನಾಗಾ ಸಾಧುಗಳು ದಿಗ್ವಿಜಯ್ ಸಿಂಗ್ ಗೆಲುವಿಗಾಗಿ ಹಠ ಯೋಗ ಆಯೋಜಿಸಿದ್ದರು. ಇದರಲ್ಲಿ ಬಿಜೆಪಿ ಸಚಿವ ಕಂಪ್ಯೂಟರ್ ಬಾಬಾ ಕೂಡ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

Scroll to load tweet…

ಪ್ರಧಾನಿ ನರೇಂದ್ರ ಮೋದಿ ಐದು ವರ್ಷ ಸರ್ಕಾರ ನಡೆಸಿದರೂ ರಾಮ ಮಂದಿರ ನಿರ್ಮಾಣ ಮಾಡಲಿಲ್ಲ. ರಾಮ ಮಂದಿರ ಇಲ್ಲ ಎಂದ ಮೇಲೆ ಮೋದಿಯೂ ಇಲ್ಲ ಎಂದು ಕಂಪ್ಯೂಟರ್ ಬಾಬಾ ಈ ವೇಳೆ ಹೇಳಿದ್ದಾರೆ.

ಈ ವೇಳೆ ದಿಗ್ವಿಜಯ್ ಸಿಂಗ್ ತಮ್ಮ ಕುಟುಂಬ ಸಮೇತ ವಿಶೇಷ ಪೂಜೆ ನೆರವೇರಿಸಿದರು. ದಿಗ್ವಿಜಯ್ ಸಿಂಗ್ ಅವರಿಗೆ ಪ್ರತಿಸ್ಪರ್ಧಿಯಾಗಿ ಬಿಜೆಪಿಯಿಂದ ಸಾಧ್ವಿ ಪ್ರಜ್ಞಾಸಿಂಗ್ ಕಣಕ್ಕೆ ಇಳಿದಿದ್ದಾರೆ.

ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ