ಬೆಂಗಳೂರು[ಮಾ. 28] ಸರಣಿ ಟ್ವೀಟ್ ಮಾಡಿರುವ ಸಿಎಂ ಕುಮಾರಸ್ವಾಮಿ ಅನಂತ್  ಕುಮಾರ್ ಹೆಗಡೆ ಅವರಿಗೆ ಪದ ಬಳಕೆಯ ಪಾಠ ಹೇಳಿದ್ದಾರೆ.

ನಾಲಿಗೆ ಸಂಸ್ಕಾರವನ್ನು ಹೇಳುತ್ತದೆ.ನನಗೆ ಬುದ್ಧಿಭ್ರಮಣೆಯಾಗಿದೆ ಎಂದರೂ ಚಿಂತೆಯಿಲ್ಲ ಆದರೆ ಇಂತಹ ಪದಬಳಕೆಯಿಂದ ಸಹಸ್ರಾರು ಪೋಷಕರಿಗೆ ಆಗುವನೋವಿನ ಕುರಿತು ನನಗೆ ಚಿಂತೆ.ಚುನಾವಣಾ ಭಾಷಣಗಳಲ್ಲಿ'ಈ ರೀತಿಯ ಪದಗಳು'ಬಳಸದಂತೆ ಚುನಾವಣಾ ಆಯೋಗಕ್ಕೆ ಕೆಲಸಂಘಗಳು ಮನವಿ ಸಲ್ಲಿಸಿರುವುದು ಸಂಸತ್ತಿಗೆ  ಸ್ಪರ್ಧಿಸುತ್ತಿರುವ ಅನಂತ್ ಅವರಿಗೆ ತಿಳಿದಿರಬೇಕಿತ್ತು  ಎಂದು ಹೇಳಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದ ’ನಿಖಿಲ್ ಎಲ್ಲಿದ್ದಿಯಪ್ಪಾ‘ ಟ್ಯಾಗ್ ಅನ್ನೇ ಬಳಸಿ ಅನಂತ್ ಕುಮಾರ್ ಹೆಗಡೆ ಟ್ವೀಟ್ ಮಾಡಿದ್ದರು.