ಡಿಕೆಶಿ ಮನೆಗೆ ಬಿಎಸ್‌ವೈ ಹೋಗಿದ್ದೇಕೆ? HDK ಹೇಳಿದ ಡೈರಿ ಗುಟ್ಟು!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 20, Apr 2019, 11:32 PM IST
CM HD Kumaraswamy Slams Karnataka BJP President BS Yeddyurappa
Highlights

ಯಡಿಯೂರಪ್ಪ ಡಿಕೆ ಶಿವಕುಮಾರ್ ಮನೆಗೆ ಏಕೆ ಹೋಗಿದ್ದರು ಎಂಬ ವಿಚಾರವನ್ನು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

ಬೆಳಗಾವಿ [ಏ. 20] ಹಲವಾರು ಪ್ರದೇಶಗಳಲ್ಲಿ ಪ್ರಚಾರ ಮಾಡಿದ್ದೇನೆ. ಈ ಚುನಾವಣೆಯಲ್ಲಿ ಮೈತ್ರಿ ಸರಕಾರದ ಅಭ್ಯರ್ಥಿಗಳು ಹೆಚ್ಚಿನ ಸ್ಥಾನ ಗೆಲ್ಲಲಿದ್ದಾರೆ ಎಂದು ಸಿಎಂ ಕುಮಾರಸ್ವಾಮಿ ಭವಿಷ್ಯ ನುಡಿದರು.

ಬಿಜೆಪಿ ಅವರು ಸರಕಾರವನ್ನ ಕೆಡವುದರ ವಿಚಾರವಾಗಿ ಡೆಡ್ ಲೈನ್ ಕೊಡುತ್ತಾ ಇದಾರೆ. ಈಗಾಗಲೆ ಆಡಿಯೋ ಕೂಡಾ ಬಹಿರಂಗವಾಗಿದೆ. ಬಿಜೆಪಿ ನಾಯಕರು ಸರಕಾರವನ್ನ ಕೆಡವಲು ಪ್ರಯತ್ನ ಮಾಡುತ್ತಿದ್ದಾರೆ  ಮೇ. 23 ಕ್ಕೆ ಬಿಜೆಪಿ ಸರಕಾರ ಬಿಳುತ್ತೆ ಎಂದು ಮೋದಿ ಅವರ ಕೈಯಲ್ಲಿ ಬಿಜೆಪಿ ನಾಯಕರೆ ಹೇಳಿಸಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದರು.

ಡಿಕೆ ಶಿವಕುಮಾರ ಮನೆಗೆ ಯಡಿಯೂರಪ್ಪ ಹೋಗಿದ್ದು ಡೈರಿ ಪ್ರಕರರಣ ಮುಚ್ಚಿಹಾಕುವುದಕ್ಕೆ. ಡಿಕೆ ಶಿವಕುಮಾರ ನಮಗೆ ಡೈರಿಯನ್ನ ತೋರಿಸಿದ್ದಾರೆ.  ನಾನು ಯಾಕೆ ಪ್ರೂವ್ ಮಾಡಲಿ, ಸಂಭಂದಪಟ್ಟ ಇಲಾಖೆಯವರು ನೋಡಿಕೊಳ್ಳುತ್ತಾರೆ ಎಂದರು.

ಲೋಕ ಸಮರಕ್ಕೂ ಮುನ್ನವೇ ಬೆಳಗಾವಿಯಲ್ಲಿ ರಾಜಕಾರಣದ ದಂಗಲ್

ನಾನು ಗಾಳಿಯಲ್ಲಿ ಗುಂಡು ಹಾರಿಸಲ್ಲ.  ಹಿಂದೆ ಗುಂಡು ಹಾರಿಸಿದಾಗ ಯಡಿಯೂರಪ್ಪ ಅವರು ಏನು ಅನುಭವಿಸಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ನಾನು ಡೈರಿ ಬಗ್ಗೆ ಚರ್ಚೆ ಮಾಡಿಲ್ಲ. ಡೈರಿ ಪ್ರಕರಣ ಮುಚ್ಚಿಹಾಕಲಿಕ್ಕೆ ಯಡಿಯೂರಪ್ಪ ಹೋಗಿದ್ದಾರೆ ಎಂದಿದ್ದೇನೆ ಎಂದು ಸ್ಪಷ್ಟಪಡಿಸಿದರು.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂಧು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28.

loader