ಸಿಎಂ ಕುಮಾರಸ್ವಾಮನಿ ವಿಜಯಪುರಲ್ಲಿ ಮಾತನಾಡುತ್ತಾ ಅನೇಕ ವಿಚಾರಗಳನ್ನು ಹೇಳಿದ್ದಾರೆ. ಮಂಡ್ಯದಲ್ಲಿ ನಿಖಿಲ್ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿಜಯಪುರ[ಏ. 19] ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ 2 ರಿಂದ 3 ಲಕ್ಷದಿಂದ ಗೆಲುವು ಪಕ್ಕಾ ಆಗಿದೆ. ಮಾಧ್ಯಮದ ವರದಿಗಾರರು ನನ್ನ ಸ್ನೇಹಿತರು ಆದರೆ ಮಾಧ್ಯಮದ ಯಜಮಾನರ ಮೇಲೆ ಕೋಪ ಇದೆ ಎಂದು ಸಿಎಂ ಕುಮಾರಸ್ವಾಮಿ ಮುದ್ದೇಬಿಹಾಳದಲ್ಲಿ ಹೇಳಿದ್ದಾರೆ.
ದೇಶದಲ್ಲಿ ಚುನಾವಣೆ ನಡೆಯುತ್ತಿದೆ. ಮಂಡ್ಯ ಕ್ಷೇತ್ರದಿಂದ TRP ತೆಗೆದುಕೊಳ್ಳಲಾಗಿದೆ. ಮಂಡ್ಯ ಕ್ಷೇತ್ರದ ಚುನಾವಣೆ ಮುಗಿದ ಮೇಲಾದರೂ ಪ್ರಧಾನಿ ಮೋದಿ ಟಿವಿಯಲ್ಲಿ ತೋರಿಸಬೇಕಿತ್ತು. ಪ್ರಧಾನಿ ಮೋದಿ ಕರ್ನಾಟಕದಲ್ಲಿ ಕಳೆದು ಹೋಗಿದ್ದಾರೆ ಎಂದರು.
ಫಲಿತಾಂಶಕ್ಕೂ ಮುನ್ನವೇ ನಿಖಿಲ್ ಕೆ. ಸಂಸದರು, ಮಂಡ್ಯ!
ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೆ ಸಿಎಂ ಆಗುತ್ತೇನೆ ಎಂದ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಸಿಎಂ ಆಗುವುದರ ಬಗ್ಗೆ ಹೇಳುವುದರಲ್ಲಿ ತಪ್ಪೇನು ಇದೆ? ರಾಜಕಾರಣಿಗಳಲ್ಲಿ ಯಾರು ಸನ್ಯಾಸಿಗಳಲ್ಲ. ಜನರಿಗೆ ಒಳ್ಳೆಯದು ಮಾಡುವುದಕ್ಕೆ ಅಧಿಕಾರ ಬೇಕು. ಯಾರು ಹಣೆಬರಹದಲ್ಲಿ ಏನು ಬರೆದಿದೆಯೋ? ಯಾವಾಗ ಯಾರ ಬೇಕಾದ್ರು ಸಿಎಂ ಆಗಬಹುದು. ನಮ್ಮ ಕೈಯಲ್ಲಿ ಏನಿದೆ ಎಂದು ಪ್ರಶ್ನೆ ಮಾಡಿದರು.
