ಹೈದರಾಬಾದ್[ಮೇ. 26]  ಒಂದು ಕಾಲದಲ್ಲಿ ತನ್ನ ಹಿರಿಯ ಅಧಿಕಾರಿಗಳಿಗೆ ಸೆಲ್ಯೂಟ್ ಹೊಡೆಯುತ್ತಿದ್ದ ವ್ಯಕ್ತಿ ಈಗ ಅವರಿಂದಲೇ ಸೆಲ್ಯೂಟ್ ಪಡೆದುಕೊಳ್ಳುತ್ತಿದ್ದಾರೆ.

ಆಂಧ್ರ ಪ್ರದೇಶದಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಆಗಿದ್ದ ಗೋರಂಟ್ಲಿ ಮಾಧವ್  ಅನಂತಪುರ ಜಿಲ್ಲೆಯ ಹಿಂದೂಪೂರ್ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದಾರೆ. ಸಿಐಡಿ ಉಪ ಪೊಲೀಸ್ ಮಹಾನಿರ್ದೇಶಕ ಮೆಹಬೂಬಾ ಪಾಷ, ನೂತನ ಸಂಸದರಿಗೆ ಸೆಲ್ಯೂಟ್ ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ಒಂದು ಕಾಲದ ಇನ್ಸ್ ಪೆಕ್ಟರ್ ನೂತನ ಸಂಸದ ಮಾಧವ್ ನಗುತ್ತಲೆ ಪ್ರತಿ ಸೆಲ್ಯೂಟ್ ನೀಡಿದ್ದಾರೆ. ಈ ಪೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವೈಸ್ ಆರ್ ಸಿಪಿ ಪಕ್ಷದಿಂದ ಸ್ಪರ್ಧಿಸಿದ್ದ ಕದ್ರಿ ಮಾಜಿ ಸರ್ಕಲ್ ಇನ್ಸ್ ಪೆಕ್ಟರ್ ಮಾಧವ್, ತೆಲುಗು ದೇಶಂ ಪಕ್ಷದ ಸಂಸದ ಕೃಷ್ಟಾಪ್ಪ ನಿಮ್ಮಾಲಾ ವಿರುದ್ಧ 1 ಲಕ್ಷದ 40 ಸಾವಿರದ 748 ಮತಗಳ ಅಂತರದ ಗೆಲುವು ಸಾಧಿಸಿದ್ದಾರೆ.