ಕೃಷ್ಣಾ(ಏ.09):ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೇ ರಾಜಕಾರಣಿಗಳ ನಾಲಿಗೆಯ ಮೇಲಿನ ಹಿಡಿತ ದಾರಿ ತಪ್ಪುತ್ತಿದೆ. ವಿಷಯಾಧಾರಿತ ರಾಜಕಾರಣ ಮರೆಯಾಗಿ ವೈಯಕ್ತಿಕ ಟೀಕೆ ಟಿಪ್ಪಣಿಗಳಿಗೆ ಚುನಾವಣೆ ಸಿಮೀತವಾಗುತ್ತಿದೆ.

 ವೈಎಸ್‌ಆರ್  ಕಾಂಗ್ರೆಸ್ ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿ ಹಾಗೂ ಟಿಆರ್‌ಎಸ್  ಮುಖ್ಯಸ್ಥ, ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಮೋದಿಯ ಸಾಕು ನಾಯಿಗಳು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಲೇವಡಿ ಮಾಡಿದ್ದಾರೆ.

ಜಗನ್ ಮೋಹನ್ ರೆಡ್ಡಿ ಹಾಗೂ ತೆಲಂಗಾಣ ಸಿಎಂ ಕೆಸಿಆರ್ ಸಾಕುನಾಯಿಯ ರೀತಿ ಮೋದಿ ಎಸೆದ ಬಿಸ್ಕತ್ ತಿನ್ನುತ್ತಿರುವುದು ನಾಚಿಕೆಗೇಡು ಎಂದು ಚಂದ್ರಬಾಬು ನಾಯ್ಡು ಹೇಳಿದ್ದಾರೆ. ಮೋದಿ ಎಸೆದ ಬಿಸ್ಕತ್ ನ್ನೇ ಇವರು ಜನರಿಗೂ ನೀಡಲು ಬಯಸಿದ್ದು, ಎಚ್ಚರಿಕೆಯಿಂದ ಇರುವಂತೆ ನಾಯ್ಡು ಜನರಲ್ಲಿ ಮನವಿ ಮಾಡಿದ್ದಾರೆ.

ರಾಜ್ಯದಲ್ಲಿ ವೈಎಸ್‌ಆರ್ ಕಾಂಗ್ರೆಸ್ ಪ್ರಚಾರಕ್ಕೆ ಬಿಜೆಪಿ ಹಣ ನೀಡುತ್ತಿದ್ದು, ಕೆಸಿಆರ್ ಕೂಡ ಜಗನ್‌ಗೆ ಸಾವಿರಾರು ಕೋಟಿ ರೂ. ನೀಡಿದ್ದಾರೆ ಎಂದು ನಾಯ್ಡು ಆರೋಪಿಸಿದರು. 

ಆಂಧ್ರಪ್ರದೇಶದಲ್ಲಿ ಏಪ್ರಿಲ್ 11 ರಂದು ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆ ಏಕಕಾಲದಲ್ಲಿ ನಡೆಯಲಿದ್ದು, ಮೇ 23 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.