ನವದೆಹಲಿ(ಮೇ.08): ಮೇ.23 ರ ಬಳಿಕ ಸರ್ಕಾರ ರಚನೆ ಸಾಧ್ಯತೆ ಕುರಿತು ಚರ್ಚಿಸಲು ವಿಪಕ್ಷಗಳು ಮೇ.21ರಂದು ಮಹತ್ವದ ಸಭೆ ಕರೆದಿವೆ. ಅತಂತ್ರ ಲೋಕಸಭೆ ರಚನೆಯಾದರೆ ಬಿಜೆಪಿಗೂ ಮೊದಲೇ ರಾಷ್ಟ್ರಪತಿಗಳ ಮುಂದೆ ಸರ್ಕಾರ ರಚನೆಗೆ ಹಕ್ಕು ಮಂಡಲಿಸಲು ವಿಪಕ್ಷಗಳು ಚಿಂತನೆ ನಡೆಸಿವೆ ಎನ್ನಲಾಗಿದೆ. 

ಈ ಹಿನ್ನೆಲೆಯಲ್ಲಿ ಇಂದು ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. 

ಲೋಕಸಭಾ ಚುನಾವಣೆ ಫಲಿತಾಂಶ ಬರುವುದಕ್ಕೂ 2 ದಿನಗಳ ಮುನ್ನ ಪ್ರತಿಪಕ್ಷಗಳ ಸಭೆ ಏರ್ಪಡಿಸುವ ಬಗ್ಗೆ ಇಬ್ಬರೂ ನಾಯಕರು ಚರ್ಚೆ ನಡೆಸಿದ್ದಾರೆ. 
 
ಚುನಾವಣೋತ್ತರ ಮೈತ್ರಿ ರಚನೆ ಮಾಡುವುದಕ್ಕೆ ಸಂಬಂಧಿಸಿದಂತೆ ಮೇ.21 ರ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ