ಮಂಡ್ಯದಿಂದ ಬೆಂಗಳೂರು ಸೆಂಟ್ರಲ್ ಗೆ ದರ್ಶನ್ ಎಂಟ್ರಿ| ಸೋಮವಾರ ಬೆಳಗ್ಗೆ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್ ಪರ ದರ್ಶನ್ ಪ್ರಚಾರ| ಹೊಸ ತಿಪ್ಪಸಂದ್ರದ ಆಂಜನೇಯ ದೇಗುಲದಿಂದ ರೋಡ್ ಶೋ.

ಬೆಂಗಳೂರು, [ಏ.07]: ಮಂಡ್ಯ ಕ್ಯಾಂಪೇನ್ ನಿಂದ ಕೊಂಚ ಬ್ರೇಕ್ ತೆಗೆದುಕೊಂಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇದೀಗ ಬೆಂಗಳೂರು ಸೆಂಟಲ್ ಗೆ ಎಂಟ್ರಿ ಕೊಡಲಿದ್ದಾರೆ.

Add Asianetnews Kannada as a Preferred SourcegooglePreferred

ನಾಳೆ (ಸೋಮವಾರ) ಬೆಂಗಳೂರು ಸೆಂಟ್ರಲ್​ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ ಮೋಹನ್​ ಪರ ಮತಯಾಚನೆ ಮಾಡಲಿದ್ದಾರೆ. ಸೋಮವಾರ ಬೆಳಗ್ಗೆ 8 ಗಂಟೆಗೆ ಹೊಸ ತಿಪ್ಪಸಂದ್ರದ ಆಂಜನೇಯ ದೇಗುಲದಿಂದ ರೋಡ್ ಶೋ ಮೂಲಕ ಪಿ.ಸಿ.ಮೋಹನ್ ಪರ ಮತಯಾಚನೆ ಮಾಡಲಿದ್ದಾರೆ.

ಇದಾದ ಬಳಿಕ ದರ್ಶನ್ ವಾಪಸ್ ಮಂಡ್ಯಕ್ಕೆ ತೆರಳಿ ಸುಮಲತಾ ಅಂಬರೀಶ್ ಪರ ಪ್ರಚಾರದಲ್ಲಿ ತೊಡಗಿಕೊಳ್ಳಲಿದ್ದಾರೆ. ಕಳೆದ ಒಂದು ವಾರ ಸುಮಲತಾ ಪರ ಮಂಡ್ಯದಲ್ಲಿ ದರ್ಶನ್ ಹಾಗೂ ಯಶ್ ಅಬ್ಬರದ ಪ್ರಚಾರ ಮಾಡಿದ್ದರು. 

ಯುಗಾದಿ ಹಬ್ಬ ಹಿನ್ನಲೆಯಲ್ಲಿ ಎರಡು ದಿನ ಪ್ರಚಾರಕ್ಕೆ ಹೋಗಿರಲಿಲ್ಲ. ಇದೀಗ ಮೋಹನ್ ಪರ ಒಂದು ರೋಡ್ ಶೋ ಮುಗಿಸಿ ವಾಪಸ್ ಮಂಡ್ಯಕ್ಕೆ ತೆರಳಲಿದ್ದು, ಎಂದಿನಂತೆ ಯಶ್ ಹಾಗೂ ದಚ್ಚು ಪ್ರತ್ಯೇಕವಾಗಿ ಸಮಲತಾ ಪರ ಮತ ಬೇಟೆ ಮಾಡಲಿದ್ದಾರೆ.