ಬೆಂಗಳೂರು[ಮೇ. 23]  28 ಲೋಕಸಭಾ ಕ್ಷೇತ್ರಗಳ ಪೈಕಿ ಕರ್ನಾಟಕದಲ್ಲಿ ಬಿಜೆಪಿ 25 ರಲ್ಲಿ ಗೆಲುವಿನ ನಗೆ ಬೀರಿದೆ. ಪಕ್ಷದ ಕಾರ್ಯಕರ್ತರು , ನಾಯಕರು, ರಾಷ್ಟ್ರೀಯ ನಾಯಕರು ಇದಕ್ಕೆ ಒಂದು ಕಡೆ ಕಾರಣವಾದರೆ ಇನ್ನೊಬ್ಬ ವ್ಯಕ್ತಿ ಸಹ ಇದರ ಹಿಂದೆ ಇದ್ದಾರೆ.

ಟೀಂ ಮೋದಿ ತಂಡದ ಮೂಲಕ ಸದಾ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಭಾಷಣಕಾರ, ಚಿಂತಕ ಚಕ್ರವರ್ತಿ ಸೂಲಿಬೆಲೆಯವರನ್ನು ಅಭಿನಂದಿಸಿ ಸೋಶಿಯಲ್ ಮಿಡಿಯಾ ಮೆಚ್ಚುಗೆ ಸೂಚಿಸುತ್ತಿದೆ.

ಮೋದಿ ಮತ್ತೆ ಯಾಕೆ ಭಾರತದ ಪ್ರಧಾನಿಯಾಗಬೇಕು ಎಂದು ಸೂಲಿಬೆಲೆ ನಿರಂತರವಾಗಿ ಹೇಳಿಕೊಂಡು ಬಂದಿದ್ದರು. ತಮ್ಮ ಭಾಷಣಗಳ ಮೂಲಕ ಸೋಶಿಯಲ್ ಮೀಡಿಯಾದಲ್ಲಿಯೂ ಅಪಾರ ಮಾಹಿತಿ ಒದಗಿಸುತ್ತಲೇ ಬಂದಿದ್ದರು.