ದೋ ಸೇ ದುಬಾರಾ...

ನವದೆಹಲಿ(ಮೇ.23): ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ದಾಖಲಿಸಿದ್ದು, ಈ ಹಿನ್ನೆಲೆಯಲ್ಲಿ ಬಿಜೆಪಿ ಇಂದು ನವದೆಹಲಿಯ ತನ್ನ ಪ್ರಧಾನ ಕಚೇರಿಯಲ್ಲಿ ಭವ್ಯ ಸಮಾರಂಭವನ್ನು ಏರ್ಪಡಿಸಿದೆ.

ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಭಾರತೀಯರು ಈ ಫಕೀರನ ಜೋಳಿಗೆ ತುಂಬಿಸಿದ್ದು, 130 ಕೋಟಿ ಭಾರತೀಯರಿಗೆ ತಮ್ಮ ಅನಂತ ಅನಂತ ಧನ್ಯವಾದಗಳು ಎಂದು ಹೇಳಿದರು.

2019ರ ಫಲಿತಾಂಶ ಭವಿಷ್ಯದ ಸದೃಢ ಭಾರತಕ್ಕೆ ಬುನಾದಿ ಹಾಕಿದ್ದು, ದೇಶವನ್ನು ಕಟ್ಟುವ ಜವಾಬ್ದಾರಿ ತಮಗೆ ನೀಡಿರುವ ಜನತೆಗೆ ಧನ್ಯವಾದ ಎಂದು ಪ್ರಧಾನಿ ಹೇಳಿದರು.

ಇಡೀ ವಿಶ್ವ ಇಂದು ಭಾರತದತ್ತ ತಿರುಗಿ ನೋಡುತ್ತಿದ್ದು, ಇದು ಭಾರತದ ಗೆಲುವಲ್ಲದೇ ಮತ್ತೇನಲ್ಲ ಎಂದು ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದರು.

ಇದಕ್ಕೂ ಮೊದಲು ಮಾತನಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ವಿಪಕ್ಷಗಳ ತಲೆಬುಡವಿಲ್ಲದ ಆರೋಪಗಳು, ವೈಯಕ್ತಿಕ ಟೀಕೆಗಳಿಗೆ ಭಾರತದ ಜನತೆ ತಕ್ಕ ಉತ್ತರ ನೀಡಿದ್ದು, ದೇಶದ 17 ರಾಜ್ಯಗಳಲ್ಲಿ ಕಾಂಗ್ರೆಸ್ ಶೂನ್ಯ ಸಂಪಾದನೆ ಮಾಡಿದೆ.

ಅದರಂತೆ ದೇಶದ 17 ರಾಜ್ಯಗಳಲ್ಲಿ ಬಿಜೆಪಿ ಶೇ.50ರಷ್ಟು ಮತಗಳಿಸಿದ್ದು, ಪ್ರಧಾನಿ ಮೋದಿ ಅವರಲ್ಲಿ ದೇಶದ ಜನತೆ ಇಟ್ಟಿರುವ ನಂಬಿಕೆಯ ಪ್ರತೀಕ ಎಂದು ಅಮಿತ್ ಶಾ ನುಡಿದರು.

ಭಾರತವನ್ನು ಕಟ್ಟುವ ಪ್ರಕ್ರಿಯೆಯಲ್ಲಿ ಇಡೀ ದೇಶ ಪ್ರಧಾನಿ ಮೋದಿ ಜೊತೆ ನಿಲ್ಲಲಿದ್ದು, 2024ರ ವೇಳೆಗೆ ಭಾರತವನ್ನು ವಿಶ್ವಗುರುವನ್ನಾಗಿ ಮಾಡುವ ಕಾರ್ಯದಲ್ಲಿ ನಿತ್ಯವೂ ದುಡಿಯುವ ಭರವಸೆ ನೀಡಿದರು.

ದೇಶದ ರಾಜಕೀಯ ಚಿತ್ರಣ