ನವದೆಹಲಿ[ಏ.27]: ಬಿಜೆಪಿ ಅಭ್ಯರ್ಥಿ ಗೌತಮ್ ಗಂಭೀರ್ ಹೊಸತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ದೆಹಲಿಯಲ್ಲಿ ಅನುಮತಿ ಇಲ್ಲದೇ ರ‍್ಯಾಲಿ ನಡೆಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಅವರ ವಿರುದ್ಧ ಕ್ರಮ ಕೈಗೊಂಡಿದೆ. ಆಯೋಗದ ಸೂಚನೆ ಮೇರೆಗೆ ದೆಹಲಿ ಪೊಲೀಸರು ಗೌತಮ್ ಗಂಭೀರ್ ವಿರುದ್ಧ FIR ದಾಖಲಿಸಿದ್ದಾರೆ. ಗೌತಮ್ ಗಂಭೀರ್ ಏಪ್ರಿಲ್ ರಂದು ರ‍್ಯಾಲಿ ಒಂದನ್ನು ಆಯೋಜಿಸಿದ್ದರು. ಅದರೆ ಇದಕ್ಕಾಗಿ ಅವರು ಜಿಲ್ಲಾಡಳಿತದ ಯಾವುದೇ ಅನುಮತಿ ಪಡೆದಿರಲಿಲ್ಲ.

ಕ್ರಿಕೆಟ್ ಕ್ಷೇತ್ರದಿಂದ ರಾಜಕೀಯಕ್ಕೆ ಎಂಟ್ರಿ ನೀಡಿರುವ ಗೌತಮ್ ವಿರುದ್ಧ ತನಿಖೆ ನಡೆಸಿರುವ ಆಯೋಗ ನುಮತಿ ಇಲ್ಲದೇ ರ‍್ಯಾಲಿ ಆಯೋಹಜಿಸಿರುವ ಗೌತಮ್ ವಿಚಾರಣೆಯನ್ನು ಎದುರಿಸಬೇಕಾಗುತ್ತದೆ. ಅವರು ಏಪ್ರಿಲ್ 25ರಂದು ನಡೆಸಿದ್ದ ರ‍್ಯಾಲಿಗೆ ಅನುಮತಿ ಪಡೆಯದೆ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದಿದೆ. ಇದೀಗ ಆಯೋಗದ ಆದೇಶದನ್ವಯ ಪೊಲೀಸರು FIR ದಾಖಲಿಸಿದ್ದಾರೆ.

ದಿಲ್ಲಿಯ ಅತ್ಯಂತ ಶ್ರೀಮಂತ ಅಭ್ಯರ್ಥಿ ಗೌತಮ್ ಗಂಭೀರ್..!

ದೀರ್ಘ ಸಮಯದಿಂದ ಬಿಜೆಪಿಯನ್ನು ಸಮರ್ಥಿಸುತ್ತಿರುವ ಗೌತಮ್ ಗಂಭೀರ್ ಕಳೆದ ತಿಂಗಳಷ್ಟೇ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಉಪಸ್ಥಿತಿಯಲ್ಲಿ ಕಮಲ ಪಾಳಯಕ್ಕೆ ಸೇರ್ಪಡೆಗೊಂಡಿದ್ದರು. ಬಳಿಕ ದೆಹಲಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಬಿಜೆಪಿ ಗೌತಮ್ ಗಮಭೀರ್ ರನ್ನು ಕಣಕ್ಕಿಳಿಸಿದೆ. 

ಬಿಜೆಪಿ ಅಭ್ಯರ್ಥಿ ಗಂಭೀರ್‌ ಬಳಿ 2 ವೋಟರ್‌ ಐಡಿ?

ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್‌ ಎರಡು ಕಡೆಗಳಲ್ಲಿ ಮತದಾನದ ಗುರುತಿನ ಚೀಟಿ ಹೊಂದಿದ್ದಾರೆ ಎಂದು ಆರೋಪಿಸಿ ಆಪ್‌ ಶುಕ್ರವಾರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ. ಗಂಭೀರ್‌ ದೆಹಲಿಯ ಕರೋಲ್‌ ಭಾಗ್‌ ಮತ್ತು ರಾಜೀಂದ್ರ ನಗರಗಳಲ್ಲಿ ಎರಡು ವೋಟರ್‌ ಐಡಿ ಹೊಂದಿದ್ದಾರೆ. ಈ ಕುರಿತು ತಮ್ಮ ಪ್ರಮಾಣಪತ್ರದಲ್ಲಿ ಮರೆಮಾಚಿದ್ದಾರೆ ಎಂದು ಆಪ್‌ ನಾಯಕಿ ಅತಿಶಿ ಸುದ್ದಿಗೋಷ್ಠಿಯ ವೇಳೆ ಆರೋಪಿಸಿದ್ದಾರೆ. ಅಲ್ಲದೇ ಎರಡೂ ವೋಟರ್‌ ಐಡಿಗಳ ಪೋಟೋಗಳನ್ನು ಅವರು ಟ್ವೀಟ್‌ ಮಾಡಿದ್ದಾರೆ. ಬಿಜೆಪಿ ಸಂಸದ ಮಹೇಶ್‌ ಗಿರಿ ಬದಲಾಗಿ ಗಂಭೀರ್‌ಗೆ ಬಿಜೆಪಿ ಟಿಕೆಟ್‌ ನೀಡಿದ್ದು, ಮೇ.12 ಕ್ಕೆ ಚುನಾವಣೆ ನಡೆಯಲಿದೆ.

ಲೋಕಸಭಾ ಚುನಾವಣೆ 2019: ನಾಮಪತ್ರ ಸಲ್ಲಿಸಿದ ಕ್ರಿಕೆಟಿಗ ಗೌತಮ್ ಗಂಭೀರ್!