ಪಾಟ್ನ[ಮೇ.02]: ಕತ್ತೆಯ ಮೇಲೆ ಸವಾರಿ ಮಾಡಿಕೊಂಡು ಬಂದು ವಿನೂತನವಾಗಿ ನಾಮಪತ್ರ ಸಲ್ಲಿಸಿದ್ದ ಬಿಹಾರದ ಜೆಹಾನಾಬಾದ್‌ನ ವ್ಯಕ್ತಿಯೊಬ್ಬರು ಇಲ್ಲದ ಸಮಸ್ಯೆಯನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಸಾಮಾನ್ಯ ಜನರನ್ನು ರಾಜಕಾರಣಿಗಳು ಕತ್ತೆಗಳಂತೆ ಕಾಣುತ್ತಾರೆ ಎಂಬುದನ್ನು ತೋರಿಸುವ ಸಲುವಾಗಿ ಮಣಿಭೂಷಣ್‌ ಎಂಬುವವರು ಕತ್ತೆ ಏರಿ ಬಂದು ನಾಮಪತ್ರ ಸಲ್ಲಿಸಿದ್ದರು. ಆದರೆ ಚುನಾವಣಾಧಿಕಾರಿಗಳು ತಾಂತ್ರಿಕ ಕಾರಣವೊಡ್ಡಿ ನಾಮಪತ್ರ ತಿರಸ್ಕರಿಸಿದ್ದಾರೆ.

ಇಷ್ಟು ಸಾಲದೆಂಬಂತೆ ಪ್ರಾಣಿಗಳ ಮೇಲೆ ಕ್ರೂರತೆ ಮೆರೆದ ಕಾರಣಕ್ಕಾಗಿ ಮಣಿಭೂಷಣ್‌ ಎಂಬ ಸ್ವತಂತ್ರ ಅಭ್ಯಥಿ ವಿರುದ್ಧ ಇದೀಗ ಪೊಲೀಸರು ಕೇಸು ಕೂಡಾ ದಾಖಲಿಸಿದ್ದಾರೆ.