Asianet Suvarna News Asianet Suvarna News

ಕರ್ನಾಟಕದ 28 ಲೋಕಸಭಾ ಸಿ-ವೋಟರ್ ಸಮೀಕ್ಷೆ: ಯಾರು ಗೆಲ್ತಾರೆ? ಯಾರು ಸೋಲ್ತಾರೆ?

ಕರ್ನಾಟದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಪಡೆದುಕೊಳ್ಳಲಿರುವ ಸೀಟುಗಳ ಬಗ್ಗೆ ಸಮೀಕ್ಷೆಗಳು ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿವೆ.  ಅದರಲ್ಲಿ ಸಿ-ವೋಟರ್ ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಚುನಾವಣೋತ್ತರ ಸಮೀಕ್ಷೆ ಪ್ರಕಟಸಿದ್ದು, 28 ಕ್ಷೇತ್ರಗಳ ಪೈಕಿ ಬಿಜೆಪಿ 20 ಸೀಟುಗಳನ್ನು ಗೆಲ್ಲಲಿದೆ ಎಂದು ಸಿ-ವೋಟರ್ ಸಮೀಕ್ಷೆ ತಿಳಿಸಿದೆ. ಹಾಗಾದ್ರೆ ಯಾವ ಕ್ಷೇತ್ರದಲ್ಲಿ ಯಾರು ಗೆಲ್ತಾರೆ? ಯಾರು ಸೋಲ್ತಾರೆ? ಇಲ್ಲಿದೆ ಸಿ-ವೋಟರ್ ಸಮೀಕ್ಷೆಯ ವರದಿ.

C Voters Exit Polls Karnataka Loksabha Constituency wise results
Author
Bengaluru, First Published May 20, 2019, 6:42 PM IST

ಬೆಂಗಳೂರು, [ಮೇ.20]: ತೀವ್ರ ಕುತೂಹಲ ಮೂಡಿಸಿದ್ದ ವಿವಿಧ ಸಂಸ್ಥೆಗಳ ಎಕ್ಸಿಟ್ ಪೋಲ್ ಹೊರಬಿದ್ದಿದ್ದು, ಬಿಜೆಪಿ ಮತ್ತು ಎನ್‌ಡಿಎ ಮೈತ್ರಿಕೂಟದ ಪರವಾಗಿದೆ. ಹೆಚ್ಚಿನ ಸಮೀಕ್ಷಗಳು ಎನ್‌ಡಿಎ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿವೆ ಎಂದು ತಿಳಿಸಿವೆ. 

ಕೆಲವು ಸಮೀಕ್ಷೆಗಳು ಮಾತ್ರ ಸರಳ ಬಹುಮತಕ್ಕಿಂತ ಕೆಲವು ಕಡಿಮೆ ಸೀಟುಗಳನ್ನು ಎನ್‌ಡಿಎ ಪಡೆದುಕೊಳ್ಳಲಿದೆ ಎಂದು ಹೇಳಿವೆ. ಅದರಲ್ಲಿ ಕರ್ನಾಟದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಪಡೆದುಕೊಳ್ಳಲಿರುವ ಸೀಟುಗಳ ಬಗ್ಗೆ ಸಮೀಕ್ಷೆಗಳು ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿವೆ. 

ಇದರ ನಡುವೆ ಸಿ-ವೋಟರ್ ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಚುನಾವಣೋತ್ತರ ಸಮೀಕ್ಷೆ ಪ್ರಕಟಸಿದ್ದು, 28 ಕ್ಷೇತ್ರಗಳ ಪೈಕಿ ಯಾವ-ಯಾವ ಕ್ಷೇತ್ರದಲ್ಲಿ ಯಾರು ಗೆಲ್ಲುತ್ತಾರೆ..? ಯಾರು ಸೋಲುತ್ತಾರೆ? ನೋಡಿ.

1. ಬೆಂಗಳೂರು ಕೇಂದ್ರ - ಸಿ-ವೋಟರ್ - ಬಿಜೆಪಿ ಪಿ.ಸಿ. ಮೋಹನ್ - ಗೆಲ್ಲುವ 
ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಸೋಲುವ ಸಾಧ್ಯತೆ

2. ಬೆಂಗಳೂರು ದಕ್ಷಿಣದಲ್ಲಿ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯಗೆ ಜಯ
ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ. ಹರಿಪ್ರಸಾದ್ ಸೋಲುವ ಸಾಧ್ಯತೆ.

3. ಬೆಂಗಳೂರು ಉತ್ತರದಲ್ಲಿ ಬಿಜೆಪಿಯ ಸದಾನಂದಗೌಡಗೆ ಗೆಲುವು
ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಭೈರೇಗೌಡಗೆ ಸೋಲುವ ಸಾಧ್ಯತೆ.

4. ಬೆಂಗಳೂರು ಗ್ರಾಮೀಣ - ಕಾಂಗ್ರೆಸ್ ನ ಡಿ.ಕೆ ಸುರೇಶ್ ಗೆಲ್ಲುವ
ಬಿಜೆಪಿ ಅಭ್ಯರ್ಥಿ ಅಶ್ವತ್ಥ್ ನಾರಾಯಣಗೆ ಸೋಲುವ ಸಾಧ್ಯತೆ.

5. ಬೀದರ್ - ಬಿಜೆಪಿ- ಭಗವಂತ್ ಖೂಬಾ- ಗೆಲುವು
  ಬೀದರ್- ಕಾಂಗ್ರೆಸ್ ಈಶ್ವರ್ ಖಂಡ್ರೆಗೆ ಹಿನ್ನಡೆ

6. ಮಂಡ್ಯ - ಸಿ-ವೋಟರ್ - ಪಕ್ಷೇತರ - ಸುಮಲತಾ - ಗೆಲವು
ಮಂಡ್ಯ - ಸಿ-ವೋಟರ್ - ಜೆಡಿಎಸ್ - ನಿಖಿಲ್ ಕುಮಾರ್ - ಸೋಲು

7. ಚಾಮರಾಜನಗರ - ಸಿ-ವೋಟರ್ - ಬಿಜೆಪಿ - ವಿ.ಶ್ರೀನಿವಾಸ್ ಪ್ರಸಾದ್ - ಗೆಲುವು
ಚಾಮರಾಜನಗರ - ಸಿ-ವೋಟರ್ - ಕಾಂಗ್ರೆಸ್ - ಆರ್.ಧ್ರುವನಾರಾಯಣ್

8. ಮೈಸೂರು-ಕೊಡಗು - ಸಿ-ವೋಟರ್ - ಕಾಂಗ್ರೆಸ್-ಸಿ.ಎಚ್.ವಿಜಯಶಂಕರ್ ಗೆಲುವು
ಮೈಸೂರು-ಕೊಡಗು - ಸಿ-ವೋಟರ್ - ಬಿಜೆಪಿ - ಪ್ರತಾಪ್ ಸಿಂಹ - - ಸೋಲು

9. ತುಮಕೂರು - ಸಿ-ವೋಟರ್ - ಜೆಡಿಎಸ್ - ಎಚ್.ಡಿ.ದೇವೇಗೌಡ - ಗೆಲುವು
ತುಮಕೂರು - ಸಿ-ವೋಟರ್ - ಬಿಜೆಪಿ - ಜಿ.ಎಸ್.ಬಸವರಾಜ್ - ಸೋಲು

10. ಚಿತ್ರದುರ್ಗ - ಸಿ-ವೋಟರ್ - ಕಾಂಗ್ರೆಸ್ - ಬಿ.ಎನ್. ಚಂದ್ರಪ್ಪ - ಗೆಲುವು
ಚಿತ್ರದುರ್ಗ - ಸಿ-ವೋಟರ್ - ಬಿಜೆಪಿ - ಎ.ನಾರಾಯಣ ಸ್ವಾಮಿ - ಸೋಲು

11. ಉಡುಪಿ-ಚಿಕ್ಕಮಗಳೂರು - ಸಿ-ವೋಟರ್ - ಬಿಜೆಪಿ - ಶೋಭಾ ಕರಂದ್ಲಾಜೆ - ಗೆಲುವು
ಉಡುಪಿ-ಚಿಕ್ಕಮಗಳೂರು - ಸಿ-ವೋಟರ್ - ಜೆಡಿಎಸ್ - ಪ್ರಮೋದ್ ಮಧ್ವರಾಜ್ - ಸೋಲು

12. ದಕ್ಷಿಣ ಕನ್ನಡ - ಸಿ-ವೋಟರ್ - ಬಿಜೆಪಿ - ನಳಿನ್ ಕುಮಾರ್ ಕಟೀಲ್ - ಗೆಲುವು
ದಕ್ಷಿಣ ಕನ್ನಡ - ಸಿ-ವೋಟರ್ - ಕಾಂಗ್ರೆಸ್ - ಮಿಥುನ್ ರೈ - ಸೋಲು

13. ಬಾಗಲಕೋಟೆ - ಸಿ-ವೋಟರ್ - ಬಿಜೆಪಿ - ಪಿ.ಸಿ.ಗದ್ದೀಗೌಡರ್ - ಗೆಲುವು
ಬಾಗಲಕೋಟೆ - ಸಿ-ವೋಟರ್ - ಕಾಂಗ್ರೆಸ್ - ವೀಣಾ ಕಾಶಪ್ಪನವರ್ - ಸೋಲು

14. ವಿಜಯಪುರ - ಸಿ-ವೋಟರ್ - ಬಿಜೆಪಿ - ರಮೇಶ್ ಜಿಗಜಿಣಗಿ - ಗೆಲುವು
ವಿಜಯಪುರ - ಸಿ-ವೋಟರ್ - ಜೆಡಿಎಸ್ - ಡಾ.ಸುನೀತಾ ಚೌಹಾಣ್ - ಸೋಲು

15. ಕಲಬುರಗಿ - ಸಿ-ವೋಟರ್ - ಕಾಂಗ್ರೆಸ್ - ಮಲ್ಲಿಕಾರ್ಜುನ ಖರ್ಗೆ - ಗೆಲುವು
ಕಲಬುರಗಿ - ಸಿ-ವೋಟರ್ - ಬಿಜೆಪಿ - ಡಾ.ಉಮೇಶ್ ಜಾಧವ್ - ಸೋಲು

16. ಹಾಸನ - ಸಿ-ವೋಟರ್ - ಜೆಡಿಎಸ್ - ಪ್ರಜ್ವಲ್ ರೇವಣ್ಣ - ಗೆಲುವು
ಹಾಸನ - ಸಿ-ವೋಟರ್ - ಬಿಜೆಪಿ - ಎ.ಮಂಜು - ಸೋಲು

17. ಬೆಳಗಾವಿ - ಸಿ-ವೋಟರ್ - ಬಿಜೆಪಿ - ಸುರೇಶ್ ಅಂಗಡಿ - ಗೆಲುವು
ಬೆಳಗಾವಿ - ಸಿ-ವೋಟರ್ - ಕಾಂಗ್ರೆಸ್ - ಡಾ.ವಿ.ಎಸ್.ಸಾಧುನ್ನವರ್ - ಸೋಲು

18. ಚಿಕ್ಕೋಡಿ - ಸಿ-ವೋಟರ್ - ಬಿಜೆಪಿ - ಅಣ್ಣಾ ಸಾಹೇಬ್ ಜೊಲ್ಲೆ - ಸೋಲು
ಚಿಕ್ಕೋಡಿ - ಸಿ-ವೋಟರ್ - ಕಾಂಗ್ರೆಸ್ - ಪ್ರಕಾಶ್ ಹುಕ್ಕೇರಿ - ಗೆಲುವು

19. ಬಳ್ಳಾರಿ - ಸಿ-ವೋಟರ್ - ಬಿಜೆಪಿ - ದೇವೇಂದ್ರಪ್ಪ - ಗೆಲುವು
ಬಳ್ಳಾರಿ - ಸಿ-ವೋಟರ್ - ಕಾಂಗ್ರೆಸ್ - ವಿ.ಎಸ್.ಉಗ್ರಪ್ಪ - ಸೋಲು

20. ದಾವಣಗೆರೆ - ಸಿ-ವೋಟರ್ - ಬಿಜೆಪಿ - ಜಿ.ಎಂ.ಸಿದ್ದೇಶ್ವರ್ - ಗೆಲುವು
ದಾವಣಗೆರೆ - ಸಿ-ವೋಟರ್ - ಕಾಂಗ್ರೆಸ್ - ಎಚ್.ಬಿ.ಮಂಜಪ್ಪ - ಸೋಲು

21. ಧಾರವಾಡ - ಸಿ-ವೋಟರ್ - ಬಿಜೆಪಿ - ಪ್ರಹ್ಲಾದ್ ಜೋಶಿ - ಗೆಲುವು
ಧಾರವಾಡ - ಸಿ-ವೋಟರ್ - ಕಾಂಗ್ರೆಸ್ - ವಿನಯ್ ಕುಲಕರ್ಣಿ - ಸೋಲು

22. ಶಿವಮೊಗ್ಗ - ಸಿ-ವೋಟರ್ - ಬಿಜೆಪಿ - ಬಿ.ವೈ.ರಾಘವೇಂದ್ರ -ಗೆಲುವು
ಶಿವಮೊಗ್ಗ - ಸಿ-ವೋಟರ್ - ಜೆಡಿಎಸ್ - ಮಧು ಬಂಗಾರಪ್ಪ - ಸೋಲು

23. ಕೊಪ್ಪಳ - ಸಿ-ವೋಟರ್ - ಕಾಂಗ್ರೆಸ್ - ರಾಜಶೇಖರ್ ಹಿಟ್ನಾಳ್ |
ಕೊಪ್ಪಳ - ಸಿ-ವೋಟರ್ -ಬಿಜೆಪಿ - ಕರಡಿ ಸಂಗಣ್ಣ - ಗೆಲುವು

24. ರಾಯಚೂರು - ಸಿ-ವೋಟರ್ - ಬಿಜೆಪಿ - ರಾಜಾ ಅಮರೇಶ್ ನಾಯಕ್ - ಗೆಲುವು
ರಾಯಚೂರು - ಸಿ-ವೋಟರ್ - ಕಾಂಗ್ರೆಸ್ - ಬಿ.ವಿ.ನಾಯಕ್ - ಸೋಲು

25. ಕೋಲಾರ - ಸಿ-ವೋಟರ್ - ಕಾಂಗ್ರೆಸ್ - ಕೆ.ಎಚ್.ಮುನಿಯಪ್ಪ - ಗೆಲುವು
ಕೋಲಾರ - ಸಿ-ವೋಟರ್ - ಬಿಜೆಪಿ - ಎಸ್.ಮುನಿಸ್ವಾಮಿ - ಸೋಲು
 
26. ಚಿಕ್ಕಬಳ್ಳಾಪುರ - ಸಿ-ವೋಟರ್ - ಬಿಜೆಪಿ - ಬಿ.ಎನ್.ಬಚ್ಚೇಗೌಡ - ಗೆಲುವು
ಚಿಕ್ಕಬಳ್ಳಾಪುರ - ಸಿ-ವೋಟರ್ - ಕಾಂಗ್ರೆಸ್ - ಡಾ.ಎಂ.ವೀರಪ್ಪ ಮೊಯ್ಲಿ - ಸೋಲು

27. ಉತ್ತರ ಕನ್ನಡ - ಸಿ-ವೋಟರ್ - ಬಿಜೆಪಿ - ಅನಂತಕುಮಾರ್ ಹೆಗಡೆ - ಗೆಲುವು
ಉತ್ತರ ಕನ್ನಡ - ಸಿ-ವೋಟರ್ - ಜೆಡಿಎಸ್ - ಆನಂದ್ ಅಸ್ನೋಟಿಕರ್ - ಸೋಲು

28. ಹಾವೇರಿ  - ಬಿಜೆಪಿ ಶವಕುಮಾರ್ ಉದಾಸಿ -  ಗೆಲುವು
ಕಾಂಗ್ರೆಸ್ ಡಿ.ಆರ್. ಪಾಟೀಲ್ -ಸೋಲು.

ಎಕ್ಸಿಟ್ ಪೋಲ್‌ಗಳಲ್ಲಿ ಅಂದಾಜಿಸಿರುವ ಅಂಕಿಗಳು ಬಿಜೆಪಿಗೆ ಖುಷಿ ನೀಡಿವೆ. ಮತ್ತೆ ಅಧಿಕಾರಕ್ಕೆ ಬರುವ ಉತ್ಸಾಹದಲ್ಲಿದ್ದ ಆಡಳಿತಾರೂಢ ಬಿಜೆಪಿಗೆ ಮತ್ತಷ್ಟು ಬಲ ಬಂದಂತಾಗಿದೆ. ಆದರೆ, ಎಕ್ಸಿಟ್ ಪೋಲ್‌ಗಳು ತಲೆಕೆಳಗಾದ ಸಾಕಷ್ಟು ಉದಾಹರಣೆಗಳಿವೆ. ಹೀಗಾಗಿ ಮೇ 23ರ ಅಂತಿಮ ಫಲಿತಾಂಶ ಬರುವವರೆಗೂ ಕಾಯುವುದು ಅನಿವಾರ್ಯ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.

Follow Us:
Download App:
  • android
  • ios