ಶಿವಮೊಗ್ಗ, (ಏ.20): ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ಮುಗಿದ ಕೂಡಲೇ ಶಿವಮೊಗ್ಗದಲ್ಲಿ ಠಿಕಾಣಿ ಹೂಡಿರುವ ಡಿಕೆ ಸಹೋದರರು, ಮಧು ಬಂಗಾರಪ್ಪ ಪರ ಮಿಂಚಿನ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. 

ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ಬಿ ವೈ ರಾಘವೇಂದ್ರ ಅವರನ್ನು ಸೋಲಿಸಲು ಪಣತೊಟ್ಟಿರುವ ಡಿಕೆಶಿ, ಅತೃಪ್ತ ಮುಖಂಡರನ್ನು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರಾಘವೇಂದ್ರ ಓಟಕ್ಕೆ ಬ್ರೇಕ್ ಹಾಕ್ತಾರಾ ಮಧು !

ಭದ್ರಾವತಿ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಸದಾ ಪ್ರತಿಸ್ಪರ್ಧಿಗಳಾಗಿ ಸೆಣೆಸುತ್ತಾ ಬಂದಿದ್ದ ಜೆಡಿಎಸ್ ನಾಯಕ, ಮಾಜಿ ಶಾಸಕ ಅಪ್ಪಾಜಿಗೌಡ ಹಾಗೂ ಕಾಂಗ್ರೆಸ್ ಶಾಸಕ ಸಂಗಮೇಶ್ ನಡುವೆ ಸಂಧಾನ ಮಾಡುವಲ್ಲಿ ಡಿಕೆಶಿ ಸಕ್ಸಸ್ ಆಗಿದ್ದಾರೆ.

ಕಳೆದೆರಡು ದಿನಗಳಿಂದ ಕ್ಷೇತ್ರದಲ್ಲಿ ನಡೆಸುತ್ತಿರುವ ಮಿಂಚಿನ ಸಂಚಾರದಿಂದ ಯಡಿಯೂರಪ್ಪನವರನ್ನು ಚಿಂತೆಗೀಡುಮಾಡಿದೆ. ಯಾಕಂದ್ರೆ ಮೈತ್ರಿ ನಾಯಕರ ಪರಸ್ಪರ ವಿರೋಧವನ್ನು ಲಾಭಪಡೆದುಕೊಳ್ಳಲು ಹೊಂಚು ಹಾಕಿದ್ದರು.

ಆದ್ರೆ, ಡಿ.ಕೆ.ಶಿವಕುಮಾರ್ ಮಧ್ಯೆ ಪ್ರವೇಶಿಸಿ ಮೈತ್ರಿ ನಾಯಕರ ತಲೆಸವರಿದ್ದು, ಯಡಿಯೂರಪ್ಪ ಅವರ ಪ್ಲಾನ್ ಗಳೆಲ್ಲ ತಲೆಕೆಳಗಾಗಿವೆ. 

ಶಿವಮೊಗ್ಗ ಉಸ್ತುವಾರಿಯನ್ನು ಡಿ.ಕೆ.ಶಿವಕುಮಾರ್ ಅವರಿಗೆ ನೀಡಬೇಕೆಂದು ಮಧು ಹೇಳಿದ್ದರು. ಅದ್ರಂತೆ ಕುಮಾರಸ್ವಾಮಿ, ಡಿಕೆಶಿ ಬಳಿ ಮನವಿಮಾಡಿಕೊಂಡಿದ್ದರು.  ಇದೀಗ ಡಿ ಕೆ ಶಿವಕುಮಾರ್ ಆಖಾಡಕ್ಕೆ ಇಳಿದ ಮೇಲೆ ಕ್ಷೇತ್ರದ ಚಿತ್ರಣ ಬದಲಾಗುತ್ತಿರುವುದಂತೂ ನಿಜ.

ಕಳೆದ ಉಪಚುನಾವಣೆಯಲ್ಲಿ 50 ಸಾವಿರ ಮತಗಳ ಅಂತರದಿಂದ ಸೋತಿದ್ದ ಮಧು ಬಂಗಾರಪ್ಪ, ಈ ಬಾರಿ ಗೆಲುವಿನ ವಿಶ್ವಾಸದಲ್ಲಿದ್ದಾರೆ. 

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.