ಅಚಾತುರ್ಯವಾಗಿ ಬಿಜೆಪಿಗೆ ಮತ ಹಾಕಿದ್ದಕ್ಕೆ ಬೇಸರ| ತನ್ನ ಕೈ ಬೆರಳನ್ನೇ ಕತ್ತರಿಸಿಕೊಂಡ ಯುವಕ| ಬಿಎಸ್‌ಪಿಯ ಕಟ್ಟಾ ಬೆಂಬಲಿಗ ಪವನ್ ಕುಮಾರ್ ವಿಡಿಯೋ ವೈರಲ್
ಬುಲಂದ್‌ಶಹರ್[ಏ.19]: ಮಾಯಾವತಿ ನೇತೃತ್ವದ ಬಿಎಸ್‌ಪಿ ಅಭ್ಯರ್ಥಿಗೆ ಮತ ಹಾಕುವ ಬದಲಿಗೆ ಅಚಾತುರ್ಯವಾಗಿ ಬಿಜೆಪಿಗೆ ಮತ ಹಾಕಿದ್ದಕ್ಕೆ ಬೇಸರಗೊಂಡ ದಲಿತ ಯುವಕನೋರ್ವ ತನ್ನ ಕೈ ಬೆರಳನ್ನೇ ಕತ್ತರಿಸಿಕೊಂಡ ದುರ್ಘಟನೆ ಬುಲಂದ್‌ಶಹರ್‌ನಲ್ಲಿ ನಡೆದಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಬಿಜೆಪಿಯ ಹಾಲಿ ಸಂಸದ ಭೋಲಾ ಸಿಂಗ್ ಹಾಗೂ ಬಿಎಸ್‌ಪಿ-ಎಸ್‌ಪಿ-ಆರ್ ಎಲ್‌ಡಿ ಮೈತ್ರಿ ಅಭ್ಯರ್ಥಿ ಯೋಗೇಶ್ ವರ್ಮಾ ಅವರು ಕಣದಲ್ಲಿದ್ದಾರೆ. ಇಲ್ಲಿನ ಗ್ರಾಮದ ಬಿಎಸ್‌ಪಿಯ ಕಟ್ಟಾ ಬೆಂಬಲಿಗ ಪವನ್ ಕುಮಾರ್[25] ಎಂಬ ಯುವಕ ಬಿಎಸ್‌ಪಿಗೆ ಮತ ಹಾಕಲು ಹೋಗಿದ್ದ. ಆದರೆ, ಅಚಾತುರ್ಯವಾಗಿ ಬಿಜೆಪಿಗೆ ಮತ ಹಾಕಿದ್ದ. ಇದರಿಂದ ಬೇಸರಗೊಂಡ ಯುವಕ ತನ್ನ ಬೆರಳನ್ನೇ ಕತ್ತರಿಸಿಕೊಂಡಿದ್ದಾನೆ.
Scroll to load tweet…
ಬಳಿಕ ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾನೆ.
