ಬೆಂಗಳೂರು (ಏ. 18): ಧಾರೆ ಮಂಟಪಕ್ಕೆ ತೆರಳುವ ಮೊದಲು ಏನೆಕಲ್ಲಿನ ನವ ವಧು ಮತ ಚಲಾಯಿಸಿ ಗಮನ ಸೆಳೆದಿದ್ದಾರೆ. ಇಂದು ಏನೆಕಲ್ಲಿನ ನವ ವಧು ಅಶ್ವಿನಿ ಹಸೆಮಣೆ ಏರಲಿದ್ದಾರೆ. ಧಾರಾ ಮಂಟಪಕ್ಕೆ ತೆರಳುವ ಮೊದಲು ಮತದಾನ ಕೇಂದ್ರಕ್ಕೆ ಹೋಗಿ ಮತ ಚಲಾಯಿಸಿದರು.

ಏನೆಕಲ್ಲಿನ ಜನಾರ್ದನ ಮತ್ತು ತೀರ್ಥಮ್ಮ  ದಂಪತಿಯ ಪುತ್ರಿ ಅಶ್ವಿನಿಯವರ ವಿವಾಹವು ಕುಕ್ಕೆ ಸುಬ್ರಹ್ಮಣ್ಯದಲ್ಲಿ ನೆರವೇರಲಿದ್ದು, ಬೆಳಿಗ್ಗೆಯೇ ಮನೆಯವರೊಂದಿಗೆ ಬಾನಡ್ಕ ಬೂತ್ ಗೆ ಬಂದ ಅವರು ಮತ ಚಲಾಯಿಸಿದರು.

ಉಡುಪಿಯ ಕಾವೂರು ಪಳನೀರಿನ ನಾರಾಯಣ ಕುಲಾಲ್ ರವರ ಪುತ್ರಿ ಮದುಮಗಳು ಕಾರ್ತಿಕಾ ಗಾಂಧಿನಗರ ಕಾಲೇಜಿನ ಮತಗಟ್ಟೆಗೆ ಬಂದು ಮತದಾನ ಮಾಡಿದರು.