ಕೊಪ್ಪಳ : ಕೊಪ್ಪಳ ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿಯವರನ್ನು  2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ  ಬಿ.ಎಲ್ ಸಂತೋಷ್ ಹೇಳಿದ್ದಾರೆ. ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಆತ್ಮ ಕೊಪ್ಪಳದಲ್ಲಿಯೇ ಇದೆ. ಸಂಗಣ್ಣ ಅವರು ಹೆಚ್ಚು ಮತಗಳ ಅಂತರದಲ್ಲಿ ಗೆದ್ದರೆ ಅವರ ಆತ್ಮಕ್ಕೆ ಏನಾಗಬೇಕೋ ಅದು ಆಗಿಯೇ ಆಗುತ್ತದೆ ಎಂದು ಹೇಳಿದ್ದಾರೆ. 

"

ಕೊಪ್ಪಳದ ಕಾರಟಗಿಯಲ್ಲಿ ನಡೆದ ಯುವ ಶಕ್ತಿ ಜಾಗೃತಿ ಸಭೆಯಲ್ಲಿ ಮಾತನಾಡಿದ ಸಂತೋಷ್ ನೀವು ಒಂದು ಮತ ಹಾಕಿದರೆ ಎರಡು ಸರ್ಕಾರ ಬರುತ್ತದೆ.  ಲೋಕಸಭೆಯೊಂದಿಗೆ ರಾಜ್ಯದಲ್ಲೀ ಬಿಜೆಪಿ ಸರ್ಕಾರ ಬರಲು ಸಹಕಾರ ನೀಡಿದಂತಾಗುತ್ತದೆ ಎಂದರು. 

ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಂತೋಷ್, ಸಾಲ ಮನ್ನಾ ಹೆಸರಿನಲ್ಲಿ ನೋಟಿಸ್ ಕೊಡುವ ಸರ್ಕಾರವನ್ನು ಬಿಳಿಸಬೇಕು. ದೇವರ ಭಕ್ತರಾದ ನರೇಂದ್ರ ಮೋದಿ ಅವರನ್ನು ಗೆಲ್ಲಿಸಬೇಕು ಎಂದರು. 

ರಾಗುಲ್ ಗಾಂಧಿ, ಪ್ರಿಯಾಂಕ ಗಾಂಧಿ ಎಲಕ್ಷನ್ ಭಕ್ತರು. ರಾಹುಲ್ ಗಾಂಧಿ ಪಂಚೆ ಕಟ್ಟಿಕೊಂಡು ದೇವಸ್ಥಾನಕ್ಕೆ ಹೋದ್ರೆ ಜೋಕರ್ ಹೋದಂಗೆ ಆಗತ್ತದೆ.  ಗಂಡ ಇದ್ದರೂ ಪ್ರೀಯಾಂಕಾ ಗಾಂಧಿ ಹಣೆ ಮೇಲೆ ಕುಂಕುಮ ಇರಲಿಲ್ಲ. ಆದರೆ ಈಗ ಅವರ ಹಣೆ ಮೇಲೆ ಕುಂಕುಮ ಬಂದಿದೆ ಎಂದರು. 

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28.