ಬೇಕಾದರೆ ಮತ್ತೆ ಬಂಧಿಸಿ ಆದರೆ ಕ್ಷಮೆ ಕೇಳಲ್ಲ ಎಂದ ಪ್ರಿಯಾಂಕಾ| ನಟಿ ಪ್ರಿಯಾಂಕಾ ಚೋಪ್ರಾ ಫೋಟೋಗೆ ಮಮತಾ ಬ್ಯಾನರ್ಜಿ ಮುಖ ಎಡಿಟ್| ಕ್ಷಮೆ ಕೇಳಲು ನಿರಾಕರಿಸಿದ ಪ.ಬಂಗಾಳ ಬಿಜೆಪಿ ನಾಯಕಿ| ಬಂಧನದಿಂದ ಬಿಡುಗಡೆಗೊಂಡ ಬಳಿಕ ಪ್ರಿಯಾಂಕಾ ಸುದ್ದಿಗೋಷ್ಠಿ| ಪೊಲೀಸರು ಇತ್ರಹಿಂಸೆ ನೀಡಿದ್ದಾರೆ ಎಂದು ಆರೋಪಿಸಿದ ಪ್ರಿಯಾಂಕಾ|
ಕೋಲ್ಕತ್ತಾ(ಮೇ.15): ನಟಿ ಪ್ರಿಯಾಂಕಾ ಛೋಪ್ರಾ ಫೋಟೋಗೆ ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮುಖ ಎಡಿಟ್ ಮಾಡಿದ್ದ ಬಿಜೆಪಿ ನಾಯಕಿ ಪ್ರಿಯಾಂಕಾ ಶರ್ಮಾ, ಕ್ಷಮೆ ಕೇಳಲು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.
Scroll to load tweet…
ಮಮತಾ ಮೆಮೆ ಫೋಟೋ ವಿವಾದ ಸೃಷ್ಟಿಸಿದ್ದ ಹಿನ್ನೆಲೆಯಲ್ಲಿ ಕೋಲ್ಕತ್ತಾ ಪೊಲೀಸರು ಪ್ರಿಯಾಂಕಾ ಶರ್ಮಾ ಅವರನ್ನು ಬಂಧಿಸಿದ್ದರು. ಬಳಿಕ ಸುಪ್ರೀಂಕೋರ್ಟ್ ಜಾಮೀನು ಮಂಜೂರು ಮಾಡಿದ ಹಿನ್ನೆಲೆಯಲ್ಲಿ ಅವರನ್ನು ಬಿಡುಗಡೆಗೊಳಿಸಲಾಗಿತ್ತು.
ಬಿಡುಗಡೆಗೊಂಡ ಬಳಿಕ ಇಂದು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಪ್ರಿಯಾಂಕಾ, ಮಮತಾ ಬ್ಯಾನರ್ಜಿ ಕ್ಷಮೆ ಕೇಳಲು ನಿರಾಕರಿಸಿದ್ದಾರೆ. ಪೊಲೀಸರು ತಮಗೆ ಚಿತ್ರಹಿಂಸೆ ನೀಡಿದ್ದು, ಯಾವುದೇ ಕಾರಣಕ್ಕೂ ಮಮತಾ ಕ್ಷಮೆ ಕೇಳಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
Scroll to load tweet…
ಕ್ಷಮಾಪಣಾ ಪತ್ರದಲ್ಲಿ ಬಲವಂತವಾಗಿ ತಮ್ಮಿಂದ ಸಹಿ ಮಾಡಿಸಿಕೊಳ್ಳಲಾಗಿದ್ದು, ತಮ್ಮ ಕೃತ್ಯಕ್ಕೆ ಯಾವುದೇ ಪಶ್ಚಾತಾಪವಿಲ್ಲ ಎಂದು ಪ್ರಿಯಾಂಕಾ ಹೇಳಿದ್ದಾರೆ.
