ಮೈಸೂರು(ಮಾ. 24)   AICC ಎಂದರೆ ಆಲ್ ಇಂಡಿಯಾ ಕ್ರಿಮಿನಲ್ ಕಾಂಗ್ರೆಸ್. KPCC ಎಂದರೆ ಕರ್ನಾಟಕ ಪ್ರದೇಶ್ ಕ್ರಿಮಿನಲ್ ಕಾಂಗ್ರೆಸ್  ಎಂದು ಬಿಜೆಪಿ ವಕ್ತಾರ ಗೋ.ಮಧುಸೂದನ್ ವ್ಯಂಗ್ಯವಾಡಿದರು.

ಕಾಂಗ್ರೆಸ್ ವಿರುದ್ದ ಮಾನನಷ್ಟ ಮೊಕದ್ದಮೆ ಹಾಕ್ತಿವಿ. ರಾಜ್ಯಾದ್ಯಂತ ಹೋರಾಟ ಮಾಡ್ತಿವಿ. ಈ ವಿಚಾರವನ್ನ ಚುನಾವಣಾ ಆಯೋಗದ ಗಮನಕ್ಕೆ ತಂದು ದೂರು ನೀಡಲಿದ್ದೇವೆ. ಡೈರಿಯಂಥ ಸುಳ್ಳು ಆರೋಪದ ಮೂಲಕ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ. ಇದೆಲ್ಲದಕ್ಕೂ ಜನರೇ ಉತ್ತರ ಕೊಡಲಿದ್ದಾರೆ ಎಂದು ಹೇಳಿದರು.

ತುಮಕೂರು ಕಾಂಗ್ರೆಸ್‌ನಲ್ಲಿ ಭಿನ್ನಮತ: ಬಂಡಾಯ ಅಭ್ಯರ್ಥಿಯಾಗಿ ಮುದ್ದ ಹನಮೇಗೌಡ?

ರಾಹುಲ್ ಗಾಂಧಿ ಒಬ್ಬ ಹೈಬ್ರಿಡ್ ಮುಸ್ಲಿಂ ಕ್ರಿಶ್ಚಿಯನ್. ಮೈಸೂರಿನಲ್ಲಿ ಬಿಜೆಪಿ ವಕ್ತಾರ ಗೋ.ಮಧುಸೂದನ್ ಹೇಳಿಕೆ. ಅವರ ಅಪ್ಪ ಮುಸ್ಲಿಂ ಕುಟುಂಬಕ್ಕೆ ಸೇರಿದವರು. ಅವರ ಅಮ್ಮ ಇಟಲಿಯಿಂದ ನೇರವಾಗಿ ಕ್ರಿಶ್ಚಿಯನ್ ಆಗಿ ಬಂದಿದ್ದಾರೆ. ಹಾಗಾಗಿ ರಾಹುಲ್ ಗಾಂಧಿ ಒಬ್ಬ ಮಿಶ್ರತಳಿ ಮನುಷ್ಯ ಎಂದು ಟೀಕಿಸಿದರು.

ಚುನಾವಣೆ ಹಿನ್ನೆಲೆ‌ ಹಿಂದುತ್ವದ ನಾಟಕಗಳನ್ನ ಆಡಿದ್ರು. ಕೋಟ್ ಮೇಲೆ ಜನಿವಾರ ಹಾಕಿದ್ರು. ದತ್ತಾತ್ರೇಯ ಗೋತ್ರದ ಬಗ್ಗೆ ಎಲ್ಲ ಮಾತನಾಡಿದ್ರು ಅದೇಲ್ಲ ಎಲ್ಲಿ ಹೋಯ್ತು? ಎಂದು ಪ್ರಶ್ನೆ ಮಾಡಿದರು.

ಮಂಡ್ಯದಲ್ಲಿ ಸುಮಲತಾಗೆ ಬೆಂಬಲ ಕೊಡುವುದೇ ಬಿಜೆಪಿ ಸ್ಟ್ಯಾಂಡ್ ಆಗಿತ್ತು. ಇದನ್ನ ರಾಷ್ಟ್ರೀಯ ಬಿಜೆಪಿ ನಾಯಕರಿಗೂ ತಿಳಿಸಿದ್ದೇವು.  ಅದರಂತೆ ಈಗ ಮಂಡ್ಯದಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ನಿಲ್ಲಿಸುತ್ತಿಲ್ಲ. ಮುಂದೆ ಸುಮಲತಾ ಯಾವ ರೀತಿ ಬೆಂಬಲ ಕೇಳುತ್ತಾರೋ ಆ ರೀತಿ ಬಿಜೆಪಿ ಬೆಂಬಲ ಕೊಡುತ್ತೆ. ರಾಜ್ಯದಲ್ಲಿ ಜೆಡಿಎಸ್ ವಂಶಪಾರಂಪರ್ಯ ಆಡಳಿತ ಕೊನೆಗಾಣಿಸುವುದೆ ನಮ್ಮ ಉದ್ದೇಶ ಎಂದರು.

ಸದ್ಯ ಕುಮಾರಸ್ವಾಮಿ  ಅವರಿಗೆ ಸುಮಲತಾ ಸ್ಟ್ರೋಕ್ ಆಗಿದೆ.  ಅದರಿಂದ ಹೊರಬರಲು ಒದ್ದಾಡುತ್ತಿದ್ದಾರೆ ಎಂದು ಹೇಳಿದರು.