6ನೇ ಹಂತದ ಮತದಾನಕ್ಕೆ ಸಜ್ಜಾದ ರಾಷ್ಟ್ರ ರಾಜಧಾನಿ ನವದೆಹಲಿ| ಒಟ್ಟು 7 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ನವದೆಹಲಿಯಲ್ಲಿ ತ್ರಿಕೋನ ಸ್ಪರ್ಧೆ| 1984ರ ಸಿಖ್ ಹತ್ಯಾಕಾಂಡ ಪ್ರಸ್ತಾಪಿಸುತ್ತಿರುವ ಬಿಜೆಪಿ| ಸಿಖ್ ನರಮೇಧದಲ್ಲಿ ಕಾಂಗ್ರೆಸ್ ಕೈವಾಡದ ಆರೋಪ| ರಾಜೀವ್ ಗಾಂಧಿ ವಿವಾದಾತ್ಮಕ ಹೇಳಿಕೆ ಟ್ವಿಟ್ ಮಾಡಿದ ಬಿಜೆಪಿ| ಸ್ಯಾಮ್ ಪಿತ್ರೋಡಾ ಅವರ 'ಆಗಿದ್ದಾಯ್ತು'ಹೇಳಿಕೆಗೆ ತೀವ್ರ ಖಂಡನೆ|

ನವದೆಹಲಿ(ಮೇ.10): ಲೋಕಸಭೆ ಚುನಾವಣೆಯ 6ನೇ ಹಂತದ ಮತದಾನ(ಮೇ.12)ಕ್ಕೆ ರಾಷ್ಟ್ರ ರಾಜಧಾನಿ ನವದೆಹಲಿ ಸಜ್ಜಾಗುತ್ತಿದೆ. ಒಟ್ಟು 7 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ದೆಹಲಿಯಲ್ಲಿ ಆಪ್, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತ್ರಿಕೋನ್ ಸ್ಪರ್ಧೆ ಏರ್ಪಟ್ಟಿರುವುದು ತೀವ್ರ ಕುತೂಹಲ ಮೂಡಿಸಿದೆ.

ಈ ಮಧ್ಯೆ ಚುನಾವಣೆಗೆ ತಮ್ಮದೇ ಆದ ರೀತಿಯಲ್ಲಿ ತಯಾರಿ ನಡೆಸಿರುವ ರಾಜಕೀಯ ಪಕ್ಷಗಳು, ಒಬ್ಬರನ್ನೊಬ್ಬರು ಹಣಿಯಲು ತಂತ್ರಗಾರಿಕೆ ಮಾಡುತ್ತಿವೆ. ಅದರಂತೆ ದೆಹಲಿಯಲ್ಲಿ ಕಾಂಗ್ರೆಸ್‌ನ್ನು ಇಕ್ಕಟ್ಟಿಗೆ ಸಿಲುಕಿಸಲು ಮುಂದಾಗಿರುವ ಬಿಜೆಪಿ 1984ರ ಸಿಖ್ ಮಾರಣಹೋಮ ಘಟನೆಯನ್ನು ಬಳಸಿಕೊಳ್ಳುತ್ತಿದೆ.

1984ರಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆ ಬಳಿಕ ದೆಹಲಿಯಲ್ಲಿ ನಡೆದಿದ್ದ ಸಿಖ್ಖರ ನರಮೇಧಕ್ಕೆ ಕಾಂಗ್ರೆಸ್ ಹೇಗೆ ಕಾರಣವಾಯಿತು ಎಂಬುದನ್ನು ಬಿಜೆಪಿ ಜನರಿಗೆ ತಲುಪಿಸುತ್ತಿದೆ.

Scroll to load tweet…

ಅಲ್ಲದೇ ಇಂದಿರಾ ಹತ್ಯೆಯ ಬಳಿಕ ನಡೆದ ಸಿಖ್ ನರಮೇಧದ ಕುರಿತು ಪ್ರತಿಕ್ರಿಯೆ ನೀಡಿದ್ದ ಅಂದಿನ ಪ್ರಧಾನಿ ರಾಜೀವ್ ಗಾಂಧಿ, 'ದೊಡ್ಡ ಮರವೊಮದು ಉರುಳಿದರೆ ಭೂಮಿ ಕಂಪಿಸುತ್ತದೆ..'ಎಂಬ ಹೇಳಿಕೆಯ ವಿಡಿಯೋವನ್ನು ಬಿಜೆಪಿ ಟ್ವಿಟ್ ಮಾಡಿದೆ.

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹೇಳಿಕೆಯಿಂದಲೇ ಸಿಖ್ ನರೆಮೇಧದಲ್ಲಿ ಕಾಂಗ್ರೆಸ್ ಕೈವಾಡ ಇರುವುದು ಸ್ಪಷ್ಟವಾಗುತ್ತದೆ ಎಂದು ಬಿಜೆಪಿ ಟ್ವಿಟ್'ನಲ್ಲಿ ಕಿಡಿಕಾರಿದೆ. ಅಲ್ಲದೇ ಸಿಖ್ ನರಮೇಧದ ಕುರಿತು ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ ನೀಡಿರುವ ಹೇಳಿಕೆಯನ್ನು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಖಂಡಿಸಿದ್ದಾರೆ.

Scroll to load tweet…

ಸಿಖ್ ನರಮೇಧದ ಕುರಿತು ಕೇಳಲಾದ ಪ್ರಶ್ನೆಗೆ ಸ್ಯಾಮ್ ಪಿತ್ರೋಡಾ 'ಆಗಿದ್ದಾಯ್ತು' ಎಂದು ಪ್ರತ್ಯುತ್ತರ ನೀಡಿರುವುದು ಕಾಂಗ್ರೆಸ್ ಪಕ್ಷಕ್ಕೆ ಮುಳುವಾಗುವ ಸಾಧ್ಯತೆ ಇದೆ.

ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ