ನವದೆಹಲಿ[ಏ.24]: ಬಹುದೊಡ್ಡ ದಲಿತ ನಾಯಕರಾಗಿ ಗುರುತಿಸಿಕೊಂಡಿರುವ ಉದಿತ್ ರಾಜ್ ಬಿಜೆಪಿಗೆ ಗುಡ್ ಬೈ ಹೇಳಿದ್ದಾರೆ. ಕಮಲ ಪಾಳಯ ಬಿಟ್ಟಿರುವ ಉದಿತ್ ಕಾಂಗ್ರೆಸ್ ಕೈ ಹಿಡಿದಿದ್ದಾರೆ. ಇದು ದೆಹಲಿಯಲ್ಲಿ ಬಿಜೆಪಿಗೆ ಭಾರೀ ಹಿನ್ನಡೆಯುಂಟು ಮಾಡಲಿದೆ ಎಂದು ಅಂದಾಜಿಸಲಾಗಿದೆ. 

ದಲಿತ ನಾಯಕರಾಗಿ ಗುರುತಿಸಿಕೊಂಡಿರುವ ಉದಿತ್ ರಾಜ್ ರನ್ನು ತಮ್ಮ ಪಕ್ಷದಲ್ಲೇ ಉಳಿಸಿಕೊಳ್ಳಲು ಬಿಜೆಪಿ ಬಹಳಷ್ಟು ಯತ್ನಿಸಿತ್ತು. ಆದರೆ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗದ ಕಾರಣ ಬೇಸತ್ತಿದ್ದರು. ಬಿಜೆಪಿ ಹಿರಿಯ ನಾಯಕರು ಉದಿತ್ ರನ್ನು ಸಮಾಧಾನಪಡಿಸಲು ಬಹಳಷ್ಟು ಯತ್ನಿಸಿದರಾದರೂ, ಯಾವುದೇ ಪ್ರಯೋಜನವಾಗಲಿಲ್ಲ. ಹಠ ಹಿಡಿದಿದ್ದ ಉದಿತ್ ಕೊನೆಗೆ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯ ಲೋಕಸಭಾ ಕ್ಷೇತ್ರಗಳೂ ಭಾರೀ ಕುತೂಹಲ ಮೂಡಿಸಿವೆ. ರಾಜಧಾನಿಯಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷಗಳು ಗದ್ದುಗೆ ಏರುವ ರೇಸ್ ನಲ್ಲಿವೆ. ಹೀಗಿರುವಾಗ ಮತದಾರ ಯಾರ ಕೈ ಹಿಡಿಯುತ್ತಾನೆ ಎಂಬುವುದನ್ನು ಕಾದು ನೋಡಬೇಕಷ್ಟೇ

ಬಿಜೆಪಿ ತೊರೆಯುವ ಬೆದರಿಕೆ ಒಡ್ಡಿದ ಮುಖಂಡ