ಬೆಂಗಳೂರು[ಮಾ. 02]  ಮಂಡ್ಯದಲ್ಲಿ ಸುಮಲತಾ ಅವರಿಗೆ ಎಲ್ಲರೂ ಬೆಂಬಲ ನೀಡಿದ್ದರೆ ಅದು ಸಂತೋಷದ ವಿಚಾರ. ಅಂಬರೀಶ್ ತೀರಿಕೊಂಡಾಗ ಅನೇಕರು
ಮೊಸಳೆ ಕಣ್ಣೀರು ಹಾಕಿದ್ದರು ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳದರು.

ಆದರೆ ಮಂಡ್ಯದಲ್ಲಿ ಸುಮಲತಾ ವಿರುದ್ದ ಕುಟುಂಬ ರಾಜಕಾರಣ ನಡೀತು. ಸುಮಲತಾ ದೊಡ್ಡ ಅಂತರದಿಂದ ಗೆದ್ದು ಬರುತ್ತಾರೆ ಎಂಬ ವಿಶ್ವಾಸ ನನಗಿದೆ. ಸಮ್ಮಿಶ್ರ ಸರ್ಕಾರ ಎಲ್ಲವೂ ಸರಿಯಿಲ್ಲ ಎಂಬುದಕ್ಕೆ ಅವರೇ ಸಾಕ್ಷಿಗಳನ್ನು ಒದಗಿಸುತ್ತಿದ್ದಾರೆ ಎಂದು ಶೋಭಾ ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ರೇಸ್ ನಲ್ಲಿ ನಾನಿಲ್ಲ. ನಾನು ಈಗ ಪ್ರಧಾನ ಕಾರ್ಯದರ್ಶಿಯಾಗಿದ್ದೇನೆ, ಸಂಸದೆಯಾಗಿಯೂ ಮತ್ತೆ ಗೆದ್ದು ಬರ್ತೀನಿ. ಎರಡು ಲಕ್ಷ ಅಂತರದಲ್ಲಿ ಗೆದ್ದು ಬರ್ತಿನಿ. ಅದನ್ನೆಲ್ಲ ರಾಷ್ಟ್ರೀಯ ಅಧ್ಯಕ್ಷರು ತೀರ್ಮಾನ ಮಾಡ್ತಾರೆ ಎಂದರು.

ನಮ್ಮ‌ಸಂಘಟನೆಯಲ್ಲಿ ಬದಲಾವಣೆ ನಿರಂತರವಾಗಿ ನಡೆಯುತ್ತೆ. ಮೂರು ವರ್ಷಗಳ ಹಿಂದೆ ಯಡಿಯೂರಪ್ಪ ರಾಜ್ಯಾಧ್ಯಕ್ಷರಾಗಿ ನೇಮಕವಾಗಿದ್ದರು ಎಂದು ಹೇಳಿದರು.