ಬೆಂಗಳೂರು, [ಮಾ.26]: ಅದೆಷ್ಟೋ ಕ್ಷೇತ್ರಗಳಲ್ಲಿ ಆಯೋಗ್ಯ ಅಭ್ಯರ್ಥಿಗಳಿದ್ರೂ, ಪಕ್ಷದ ನಾಯಕರ ಮುಖ ನೋಡಿ ಮತ ನೀಡುವವರ ಸಂಖ್ಯೆ ಹೆಚ್ಚಾಗಿದೆ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯಗೆ ಟಾಂಗ್​ ನೀಡಿದ್ದಾರೆ.

ಟಿಕೆಟ್​ ಕೈತಪ್ಪಿದ ಹಿನ್ನೆಲೆ ಡಾ.ತೇಜಸ್ವಿನಿ ಅನಂತಕುಮಾರ್ ನಿವಾಸಕ್ಕೆ ಭೇಟಿ ನೀಡಿದ ಬಸನಗೌಡ ಪಾಟೀಲ್ ಯತ್ನಾಳ್, ಡಾ.ತೇಜಸ್ವಿನಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. 

ನಾಮಪತ್ರ ಸಲ್ಲಿಕೆಗೆ ನಾಯಕರು ಗೈರು! ‘ಸೂರ್ಯ’ನಿಗೆ ಬಂಡಾಯದ ಬಿಸಿ?

ಬಳಿಕ ಮಾತನಾಡಿದ ಅವರು, ಕರ್ನಾಟಕದಲ್ಲಿ ಬಿಜೆಪಿ‌ ಕಟ್ಟಿದ್ದು ಯಡಿಯೂರಪ್ಪ ಹಾಗೂ ಅನಂತಕುಮಾರ್. ಇನ್ನು ಬಿಜೆಪಿ ಯಶಸ್ಸಿಗೆ ಅನಂತ್ ಕುಮಾರ್ ಅವರ ಕುಟುಂಬದ ಕೊಡುಗೆ ಬಹಳಷ್ಟು ಇದೆ.

ತೇಜಸ್ವಿನಿ ಅವರು ಟಿಕೇಟ್ ಗಾಗಿ ಬೇಡಿಕೆ ಅರ್ಜಿ ಹಾಕಿರಲಿಲ್ಲ. ನಾವೇ ಹೋಗಿ ಅವರನೇ ಕರೆದು ತಂದು ಇವಾಗ ಹೀಗೆ ಮಾಡಿದ್ದು ತಪ್ಪು. ಯಾರದೇ ಕುತಂತ್ರ ಇದ್ರು ಅದು ಹೆಚ್ಚು ದಿನ‌ ಉಳಿಯೋದಿಲ್ಲ ಎಂದು ತಮ್ಮ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

’ಬಿಜೆಪಿ ನಾಯಕರೇ... ಸುಮಲತಾಗೊಂದು ನ್ಯಾಯ, ತೇಜಸ್ವಿನಿಗೊಂದು ನ್ಯಾಯನಾ?’

ಎಲ್ಲಾ ಕ್ಷೇತ್ರಗಳು ಒಂದೇ ಸಮ ಎಂದು ಭಾವಿಸಲು ಸಾಧ್ಯವಿಲ್ಲ. ಅನೇಕ ಕಡೆ ಅಯೋಗ್ಯ ಅಭ್ಯರ್ಥಿಗಳು ಇದ್ದಾರೆ. ಆಯಾ ಕ್ಷೇತ್ರದ ಅಭ್ಯರ್ಥಿಯನ್ನು ನೋಡಿ ಯಾರೂ ಮತ ಹಾಕುವುದಿಲ್ಲ. ಬದಲಾಗಿ, ದೇಶದಲ್ಲಿ ನರೇಂದ್ರ ಮೋದಿ ಅವರ ಮುಖ ನೋಡಿ ಎಷ್ಟೋ ಕ್ಷೇತ್ರಗಳಲ್ಲಿ ಮತ ಚಲಾಯಿಸುತ್ತಾರೆ ಎಂದು ಪರೋಕ್ಷವಾಗಿ ಸ್ವಪಕ್ಷದ ಅಭ್ಯರ್ಥಿಗಳ ವಿರುದ್ಧ ಕಿಡಿಕಾರಿದರು.