ಪಾಟ್ನಾ(ಮಾ.17): ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ತಿರುಗಿ ಬಿದ್ದಿರುವ ನಟ ಹಾಗೂ ಬಿಜೆಪಿ ನಾಯಕ ಶತೃಘ್ನ ಸಿನ್ಹಾ ಅವರಿಗೆ ಪಾಠ ಕಲಿಸಲು ಪಕ್ಷ ಮುಂದಾಗಿದೆ.

ಪಾಟ್ನಾ ಸಾಹಿಬ್ ಲೋಕಸಭಾ ಕ್ಷೇತ್ರವನ್ನು ಶತ್ರುಘ್ನ ಸಿನ್ಹಾ ಅವರಿಂದ ಕಸಿದು, ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರನ್ನು ಕಣಕ್ಕಿಳಿಸಲು ಬಿಜೆಪಿ ಸಿದ್ಧತೆ ನಡೆಸಿದೆ.

ಶತೃಘ್ನ ಸಿನ್ಹಾ ಪಕ್ಷೇತರವಾಗಿ ಅಥವಾ ಮಹಾಘಟಬಂಧನದ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂದು ಮೂಲಗಳು ತಿಳಿಸಿದ್ದು, ಇದಕ್ಕೆ ಪ್ರತಿಯಾಗಿ ಸದ್ಯ ರಾಜ್ಯಸಭಾ ಸದಸ್ಯರಾಗಿರುವ ರವಿಶಂಕರ ಪ್ರಸಾದ್ ಅವರನ್ನು ಕಣಕ್ಕಿಳಿಸಲು ಬಿಜೆಪಿ ಮುಂದಾಗಿದೆ ಎಂದು ಹೇಳಲಾಗಿದೆ.