ಶಿವಮೊಗ್ಗ, (ಏ.18): ಮಧು ಬಂಗಾರಪ್ಪನವರು ತಮ್ಮ 5 ವರ್ಷದ ಅಧಿಕಾರಾವಧಿಯಲ್ಲಿ ಯಾರೋ ಹುಟ್ಟಿಸಿದ ಮಗುವಿಗೆ ಹೆಸರು ಇಡುವ ಕೆಲಸ ಮಾಡಿದ್ದಾರೆ ಎಂದು ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿ ಶೆಟ್ಟಿ ವ್ಯಂಗ್ಯವಾಡಿದ್ದಾರೆ.

ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೊರಬದಲ್ಲಿ ಹಾಲಪ್ಪ ಕಟ್ಟಿಸಿದ ಬಸ್ ನಿಲ್ದಾಣ ಸೇರಿದಂತೆ ಮೊದಲಾದ ಕಾಮಗಾರಿಯನ್ನು ಉದ್ಘಾಟಿಸಿದ್ದಾರೆ. ತಾವು ಮಾಡಿದ ಸಾಧನೆ ಯನ್ನು ಹೇಳದೇ ಮಧು ಬಂಗಾರಪ್ಪ ಇನ್ಯಾರದೋ ಸಾಧನೆಯನ್ನು ತಮ್ಮದೆಂದು  ಹೇಳುತ್ತಾರೆ. ಸೊರಬದಲ್ಲಿ ಒಂದು ಶೌಚಾಲಯ ಇರಲಿಲ್ಲ. ಅದಕ್ಜೂ ಬಿಜೆಪಿ ಅಧಿಕಾರಕ್ಕೆ ಬರಬೇಕಾಯಿತು ಎಂದು ವಾಗ್ದಾಳಿ ನಡೆಸಿದರು.

ಇದೇ ವೇಳೆ ಗೀತಾ ಶಿವರಾಜ್ ಹೇಳಿಕೆಗೆ ಪ್ರತಿಕ್ರಿಯಿಸಿದ ಭಾರತಿ ಶೆಟ್ಟಿ,  ಅವರು ಸೋತ ನಂತರ ಯಾವಾಗ ಬಂದು ಜನರ ಪರ ಹೋರಾಟ ಮಾಡಿದ್ದಾರೆ? ಯಾರಾದೋ ಮಗಳಾದರೆ ಸಾಕಾ? ಎಂದು ಪ್ರಶ್ನಿಸಿದರು.

ಗೀತಾ ಶಿವರಾಜ್ ಕುಮಾರ್ ಅವರು ಯಡಿಯೂರಪ್ಪ ನವರು ಸುಳ್ಳು ಹೇಳುತ್ತಾರೆಂದು ಹೇಳಿಕೆ ನೀಡಿದ್ದರು. ಅದಕ್ಕೆ ಈಗ ಭಾರತಿ ಶೆಟ್ಟಿ ತಿರುಗೇಟು ನೀಡಿದರು.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.