ಲಕ್ನೋ : ದೇಶದಲ್ಲಿ ಇನ್ನೊಂದು ಹಂತದ ಲೋಕಸಭಾ ಚುನಾವಣೆ ಮಾತ್ರವೇ ಬಾಕಿ ಉಳಿದಿದೆ. ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಮಧ್ಯಪ್ರದೇಶದ ಖರ್ಗೋನೆಯಲ್ಲಿ ಕೊನೆಯ ಹಂತದ ಚುನಾವಣಾ  ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದು, ಬಿಜೆಪಿ ನೇತೃತ್ವದ NDA ಮೈತ್ರಿಕೂಟ 300ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಇದೇ ವೇಳೆ ಮಧ್ಯ ಪ್ರದೇಶದ ಖರ್ಗೋನೆಯ ಜನರು ಮತ್ತೊಮ್ಮೆ BJP ಅಧಿಕಾರಕ್ಕೆ ತರಲು ನಿರ್ಧರಿಸಿದ್ದು, ಈ ನಿಟ್ಟಿನಲ್ಲಿ ಇಲ್ಲಿನ ಜನರಿಗೆ ಧನ್ಯವಾದ  ಹೇಳಿದ್ದಾರೆ. ಅತೀ ಹೆಚ್ಚಿನ ಮತಗಳ ಅಂತರದಲ್ಲಿ ಜನರು ಬಿಜೆಪಿ ಗೆಲ್ಲಿಸಲಿದ್ದಾರೆ ಎಂದರು. 

ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಕಚ್ ನಿಂದ ಕಮ್ರಪ್ ವರೆಗೆ ಇಡೀ ದೇಶವೇ 300 ಸ್ಥಾನಗಳೊಂದಿಗೆ ಮತ್ತೊಮ್ಮೆ ಮೋದಿ ಸರ್ಕಾರ ಎಂದು ಹೇಳುತ್ತಿದೆ. ಇದರಿಂದ ಮತ್ತೆ ಬಿಜೆಪಿ ಸರ್ಕಾರ ಆಡಳಿತಕ್ಕೆ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು. 

ನಮ್ಮ ದೇಶದ 130 ಕೋಟಿ ಜನತೆಯ ಆಯ್ಕೆಯೂ ಬಿಜೆಪಿ ನೇತೃತ್ವದ NDA ಆಗಿದೆ.  ನೀವು ಕೊನೆಯ ಹಂತದ ಮತ ಚಲಾವಣೆಗೆ ತೆರಳುವ ಮುನ್ನ  ಭಾರತದ ಇತಿಹಾಸವನ್ನು ಒಮ್ಮೆ ನೆನಪಿಸಿಕೊಳ್ಳಿ. ಉತ್ತಮ ಸರ್ಕಾರವನ್ನು ಎರಡನೇ ಬಾರಿ ಅಧಿಕಾರ ನೀಡಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.  

ಮೇ 19 ರಂದು ಕೊನೆಯ ಹಂತದ ಲೋಕಸಭಾ ಚುನಾವಣೆ ನಡೆಯಲಿದ್ದು, ಮೇ 23 ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.