ಯಾದಗಿರಿ :  ಲೋಕಸಭಾ ಚುನಾವಣಾ ದಿನಾಂಕ ಘೋಷಣೆಯಾಗಿದ್ದು, ಇದೇ ವೇಳೆ ವಿವಿಧ ಪಕ್ಷಗಳು ಚುನಾವಣಾ ತಯಾರಿಯಲ್ಲಿ ತೊಡಗಿವೆ. 

ಈಗಾಗಲೇ ಪಕ್ಷಗಳಿಂದ ಪ್ರಚಾರ ಕಾರ್ಯವೂ ಆರಂಭವಾಗಿದ್ದು, ಇಲ್ಲೊಂದು ಮದುವೆ ಕಾರ್ಡ್ ನಲ್ಲಿಯೇ ಬಿಜೆಪಿ ಪರ ಪ್ರಚಾರ ಮಾಡಲಾಗಿದೆ.

ಮದುವೆ ಕಾರ್ಡಲ್ಲಿ ಮತ್ತೊಮ್ಮೆ ಮೋದಿ ಎಂದು ಬಿಜೆಪಿ ಕಾರ್ಯಕರ್ತರು ಪ್ರಿಂಟ್ ಮಾಡಿಸಿದ್ದಾರೆ. 

ಇದೆ ಮಾರ್ಚ್ 24 ಕ್ಕೆ ಯಾದಗಿರಿ ಜಿಲ್ಲೆಯ ಶಹಪುರ ಪಟ್ಟಣದಲ್ಲಿ  ಬಿಜೆಪಿ ಕಾರ್ಯಕರ್ತರಾದ ಬಸವರಾಜ ಹಾಗೂ ಸಹೋದರ ಶರಣಬಸವ ಅವರ ವಿವಾಹ ನಡೆಯುತ್ತಿದೆ.  

ಈ ಮದುವೆ ಆಮಂತ್ರಣದ ಮೇಲೆ ಸಾಲು ಸಾಲು ಬಿಜೆಪಿ ನಾಯಕರ ಫೋಟೊ ಪ್ರಿಂಟ್ ಮಾಡಿಸಲಾಗಿದೆ.  ಪ್ರಧಾನಿ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್, ಕೇಂದ್ರ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ,   ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ರಾಜುಗೌಡ,ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಹಾಗೂ ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ್ ಭಾವಚಿತ್ರಗಳನ್ನು ಪ್ರೀಂಟ್ ಮಾಡಿಸಲಾಗಿದೆ.