ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇದೇ ಸಂದರ್ಭದಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಅಭ್ಯರ್ಥಿ ಎಂದೇ ಪರಿಗಣಿತವಾಗಿದ್ದ ತೇಜಸ್ವಿನಿ ಅನಂತ್ ಕುಮಾರ್ ಗೆ ಕೊನೆಯ ಕ್ಷಣದಲ್ಲಿ ಟಿಕೆಟ್ ಕೈ ತಪ್ಪಿತು.
ಬೆಂಗಳೂರು : ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂದೇ ಬಿಂಬಿತರಾಗಿ ಕೊನೆಯ ಕ್ಷಣದಲ್ಲಿ ಟಿಕೆಟ್ ವಂಚಿತರಾದವರು ತೇಜಸ್ವಿನಿ ಅನಂತ್ ಕುಮಾರ್. ಬಳಿಕ ಈ ಕ್ಷೇತ್ರದಲ್ಲಿ ತೇಜಸ್ವಿ ಸೂರ್ಯಗೆ ಟಿಕೆಟ್ ದೊರೆಯಿತು.
ಬಳಿಕ ಬಿಜೆಪಿ ರಾಜ್ಯ ಉಪಾಧ್ಯಕ್ಷೆಯಾದ ತೇಜಸ್ವಿನಿ ಅವರ ಟ್ವೀಟ್ ಇದೀಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಮೋಡ ಬಿರಿತರೆ ಮಳೆಯಾಗುತ್ತದೆ
ಮಣ್ಣು ಬಿರಿತರೆ ಹೊಲವಾಗುತ್ತದೆ
ಬೆಳೆ ಮುರಿದರೆ ಇಳುವರಿ ಬರುತ್ತದೆ
ಬೀಜ ಬಿರಿತರೆ ಗಿಡವಾಗುತ್ತದೆ
ನಮಗೆ ನೋವಾದರೆ ಮುಂದೆ ದೇವರು ಒಳ್ಳೆಯದನ್ನು ಮಾಡುತ್ತಾನೆ ಎಂದರ್ಥ. ಶಾಂತಿಯಿಂದ ಬದುಕುವುದು ಕಲಿಯೋಣ ಎಂದು ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಹಲವರು ಪ್ರತಿಕ್ರಿಯಿಸಿ, ಸಾಂತ್ವನ ಹೇಳಿದ್ದಾರೆ.
ದೇವರು ಯೋಜನೆಯೊಂದನ್ನು ರೂಪಿಸಿಯೇ ಇರುತ್ತಾನೆ. ಅನಂತ್ ಕುಮಾರ್ ಅವರನ್ನು ನಾವು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ. ದೇವರು ನಿಮಗೆ ಶಕ್ತಿ ನೀಡಲಿ. ಕೆಟ್ಟ ಶಕ್ತಿಗಳ ವಿರುದ್ಧ ಒಳ್ಳೆಯ ಶಕ್ತಿಗಳ ಹೋರಾಟಕ್ಕೆ ಕೈ ಜೋಡಿಸಿ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನೋರ್ವರು ನಿಮ್ಮ ಗುರಿ ದೇಶ ಹಾಗೂ ಪಕ್ಷಕ್ಕೆ ಕೊಡುಗೆ ನೀಡುವುದು. ನಾವು ನಿಸ್ವಾರ್ಥಿಗಳಾದಾಗ ನೋವಾಗುವ ಸ್ಥಿತಿ ಬರುವುದಿಲ್ಲ ಎಂದಿದ್ದಾರೆ.
ಇನ್ನೋರ್ವರು ಟ್ವೀಟ್ ಮಾಡಿ ರಾಜಕೀಯ ಕ್ಷೇತ್ರದ ಬಗ್ಗೆ ಇದ್ದ ಕೆಟ್ಟ ಭಾವನೆ ತೊಡೆದು ಹಾಕಿದ್ದು ನೀವು, ನಿಮ್ಮ ಬೆರಳೆಣಿಗಳಿಂದ ನಮಗೆ ರಾಜಕೀಯದ ಮೇಲೆ ನಂಬಿಕೆ ಬಂದಿದೆ.
