ರಾಜಕೀಯ ಸನ್ಯಾಸತ್ವದ ಬಗ್ಗೆ ಮಾತನಾಡಿದ ಶ್ರೀ ರಾಮುಲು

ಲೋಕಸಭಾ ಚುನಾವಣಾ ಕಣ ರಂಗೇರಿದ ಈ ಸಂದರ್ಭದಲ್ಲಿಯೇ  ನಾಯಕರ ವಾಕ್ ಪ್ರಹಾರಗಳು ಜೋರಾಗಿದೆ. ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡ ಶ್ರೀ ರಾಮುಲು ಇದೇ ಸಂದರ್ಭದಲ್ಲಿ ರಾಜಕೀಯ ಸನ್ಯಾಸತ್ಬದ ಬಗ್ಗೆ ಮಾತನಾಡಿದ್ದಾರೆ. 

BJP Leader Sriramulu Slams CM HD kumaraswamy In Bellary

ಬಳ್ಳಾರಿ : ಲೋಕಸಭಾ ಚುನಾವಣ ಕಣ ರಾಜ್ಯದಲ್ಲಿ ರಂಗೇರಿದೆ. ನಾಯಕರು ಭರ್ಜರಿ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.  ಇದೇ ವೇಳೆ ವಿವಿಧ ನಾಯಕರ ನಡುವೆ ವಾಕ್ಸಮರಗಳು ಜೋರಾಗಿವೆ. ಬಿಜೆಪಿ ನಾಯಕ ಶ್ರೀ ರಾಮುಲು ಇದೀಗ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಹೊಸ ಸವಾಲೊಂದನ್ನು ಹಾಕಿದ್ದಾರೆ. ತಮ್ಮ ಮೇಲೆ ಒಂದೇ ಒಂದು ಆರೋಪವನ್ನು ತೋರಿಸಿದಲ್ಲಿ ರಾಜಕೀಯ ಸನ್ಯಾಸತ್ವ ಪಡೆಯುವುದಾಗಿ ಹೇಳಿದ್ದಾರೆ. 

"

 ರಾಜ್ಯದ ಮುಖ್ಯಮಂತ್ರಿಗೆ ಬುದ್ದಿ ಇಲ್ಲ, ನನ್ನ ವಿರುದ್ಧ ಮಾತನಾಡುವಾಗ ಹುಷಾರಾಗಿ ಮಾತನಾಡಲಿ ಎಂದು ಶ್ರೀರಾಮುಲು ಸಿಎಂ ಹಾಗೂ ದೋಸ್ತಿ ನಾಯಕರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.ಅಲ್ಲದೇ ಮೈತ್ರಿ ನಾಯಕರು ಪಾಕಿಸ್ತಾನದ ಏಜೆಂಟರ್ ಗಳ ಥರ ವರ್ತನೆ ಮಾಡುತ್ತಿದ್ದಾರೆ.  ಮಾಡ್ತಿದ್ದಾರೆ, ಸೋಲಿನ ಭೀತಿ ಎದುರಾಗಿದ್ದು, ಹತಾಶರಾಗಿದ್ದಾರೆ ಎಂದರು. 
 
ಬಳ್ಳಾರಿಯಲ್ಲಿ ಮಾತನಾಡಿದ ಶಾಸಕ ಶ್ರೀರಾಮುಲು,  ರಾಜ್ಯದಲ್ಲಿ 24 ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಪಡೆಯುತ್ತದೆ. ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ ನೆಲ ಕಚ್ಚುತ್ತದೆ.  ಬಿಜೆಪಿಯೇ ಗೆಲ್ಲುತ್ತದೆ.  ದೋಸ್ತಿ ಪಕ್ಷದ ನಾಯಕರು  ಮೇಲೆ ಮಾತ್ರ ಒಗ್ಗಟ್ಟಾಗಿದ್ದಾರೆ. ಕೆಳಗಡೆ ಯಾರು ಸರಿ ಇಲ್ಲ. ರಾಜ್ಯದಲ್ಲಿ ಲೋಕಸಭೆ ಚುನಾವಣೆ ನಂತರ ಬಹಳಷ್ಟು ಬದಲಾವಣೆ ಆಗುತ್ತದೆ. ರಾಜ್ಯ ಸರ್ಕಾರ ಬುದ್ದು ಹೋಗುತ್ತದೆ ಎಂದರು. 

Latest Videos
Follow Us:
Download App:
  • android
  • ios