ಬೆಳಗಾವಿ(ಏ. 19)  ಬಿಬಿಎಂಪಿ ವ್ಯಾಪ್ತಿ ಹೊರತು ಪಡಿಸಿ ಉಳಿದ ಕಡೆ ಮತದಾನ ಪ್ರಮಾಣ ಹೆಚ್ಚಳವಾಗಿದೆ.  ನಗರದ‌ ಮತದಾರರು ಮತ ಚಲಾಯಿಸಲು ಮುಂದೆ ಬರಬೇಕು.  ಪ್ರಧಾನಿ ನರೇಂದ್ರ ಮೋದಿ ನೀಡಿದ ಭರವಸೆಯಂತೆ ಭ್ರಷ್ಟಾಚಾರ ರಹಿತ ಆಡಳಿತ ನಡೆಸಿದ್ದಾರೆ., ದೇಶದ ತಲೆ ತಗ್ಗಿಸುವ ಕೆಲಸ ಮಾಡಿಲ್ಲ ಎಂದು ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಹೇಳಿದರು.

ಉಜ್ವಲ ಗ್ಯಾಸ್, ಪಂಡಿತನ ದೀನದಯಾಳ್ ಯೋಜನೆ ಮೂಲಕ ಮನೆ‌ಮನೆಗೆ ಮುಟ್ಟುವ ಕೆಲಸ ಮಾಡಿದ್ದಾರೆ. ಆಯುಷ್ಮಾನ ಭಾರತ ಯೋಜನೆ ಜನಪ್ರಿಯವಾಗಿದ್ದಿ  ಅರ್ಜಿಗಳು ಇನ್ನು  ಬರುತ್ತಿವೆ ರೈತರಿಗೆ ಬಡವರಿಗೆ, ಮಧ್ಯಮ ವರ್ಗದ ಅನುಕೂಲವಾಗಿದೆ.
ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ಯುವಕರಿಗೆ ಉದ್ಯೋಗ, ಮೂಲಭೂತ ಸೌಕರ್ಯ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ ಎಂದು ವಿವರಿಸಿದರು.

ಶಿಷ್ಯನ ಭದ್ರಕೋಟೆಯಲ್ಲಿ ‘ಸಿದ್ದುರಾಗಾ’; ನಿಲುವು ಬದಲಿಸ್ತಾರಾ ಸಾಹುಕಾರ?

ದೇಶದ ಗಡಿಗಳ ರಕ್ಷಣೆ, ಭಾರತೀಯರಿಗೆ ಭದ್ರತೆ ನೀಡಲಾಗುತ್ತಿವೆ. ರಕ್ಷಣಾ ಕ್ಷೇತ್ರದಲ್ಲಿ ತಂತ್ರಜ್ಞಾನ, ಲೈಫ್ ಜಾಕೇಟ್ ಅಳವಡಿಸಿದ ಎ. ಸೈನ್ಯದ ಬೇಡಿಕೆ ಈಡೇರಿಸಲಾಗಿದೆ. 4 ಸಾವಿರ ಚದರ ಕಿಮಿ ಭೂ ಪ್ರದೇಶ ಗಡಿ ಇದೆ. ಮಹಾಘಟ್ ಬಂಧನ ವಿರುದ್ಧ ಮೋದಿ ನಡುವೆ ಸ್ಪರ್ಧೆ ಇದೆ.  ವಿರೋಧಿಗಳು  ಅಭಿವೃದ್ಧಿ ಆಧಾರದ ಮೇಲೆ ಮತ ಕೇಳುತ್ತಿಲ್ಲ. ಬದಲಾಗಿದೆ ಆರೋಪ ಪ್ರತ್ಯಾರೋಪ ಮೇಲೆ‌ಮತ ಕೇಳುತ್ತಿದ್ದಾರೆ ಎಂದರು.

ಕಾಂಗ್ರೆಸ್, ಮಿತ್ರ ಪಕ್ಷಗಳ ಆಡಳಿತದಲ್ಲಿ ಯಾವುದೆ ಅಭಿವೃದ್ಧಿ ಆಗಿಲ್ಲ. ಕೇರಳದ ವಯನಾಡಲ್ಲಿ ದೇಶದ ವಿರುದ್ಧದ ಚಟುವಟಿಕೆ ನಡೆದಾರೂ ಕ್ರಮ ಕೈಗೊಳ್ಳಲಾಗುತ್ತಿಲ್ಲ. ಪ್ರತಿಪಕ್ಷಗಳ‌ನಾಯಕರು ಮೋದಿಗೆ ಹೆದರಿ ಮೋದಿ ತಗಳುವ  ಜಪ‌ಮಾಡುತ್ತಿದ್ದಾರೆ. ಸಾಲಮನ್ನಾ ಯೋಜನೆ ಯಾರಿಗೆ, ಎಷ್ಟು ಮಾಡಿದ್ದಾರೆ ಎಂಬುದಕ್ಕೆ ಸಿಎಂ ಬಳಿ ಉತ್ತರ ಇಲ್ಲ ಎಂದು ಆರೋಪಿಸಿದರು.

ಕೊಡಗನ್ನು ಸಂಪೂರ್ಣ ವಾಗಿ ನಿರ್ಲಕ್ಷಿಸಲಾಗಿದೆ. ಬರಗಾಲ ಬಗ್ಗೆ ಯೋಜನೆ ಮಾಡಿಕೊಂಡಿಲ್ಲ. ಸಿದ್ದರಾಮಯ್ಯ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ ವಿನಃ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿಲ್ಲ ಎಂದರು.

ರಾಹುಲ್ ಅಥವಾ ದೇವೇಗೌಡರ ಮುಖ ಇಟ್ಟುಕೊಂಡು‌ಮತ ಕೇಳುತ್ತೀರಾ.‌ನಿಮ್ಮಲ್ಲಿ‌ಪ್ರಧಾನಿ ಯಾರು ಎಂದು ಪ್ರಶ್ನೆ ಮಾಡಿದರು. ಕಾಂಗ್ರೆಸ್ ಆಂತರಿಕ ಸಮಸ್ಯೆಯನ್ನು ಬಿಜೆಪಿಗೆ ತಲೆಗೆ ಕಟ್ಟುವ ಕೆಲಸ ಮಾಡುತ್ತಿದೆ. ಇದಕ್ಕೆ ಬಿಜೆಪಿ ಹೊಣೆ ಅಲ್ಲ ಕಾಂಗ್ರೆಸ್ ಬಿಟ್ಟು ಬಂದರೆ ಸ್ವಾಗತ ಆದರೆ ಕ್ರಿಮಿನಲ್ ಕೇಸ್  ಇದ್ದವರಿಗೆ ಅವಕಾಶ ಇಲ್ಲ. ಯಾವುದೇ ರೀತಿ ಚರ್ಚೆಗಳು ನಡೆದಿಲ್ಲ. ಮೈತ್ರಿ ಸರ್ಕಾರದ ಪಾಪದ‌‌ ಕೆಲಸದಿಂದ‌  ಮುಳಗಲಿದೆ ಎಂದು ಒಗಟಾಗಿ ಮಾತನಾಡುತ್ತ ಹೊಸ ರಾಜಕಾರಣದ ಸೂಚನೆಯನ್ನು ನೀಡದರು ಎಂಬ ಮಾತುಗಳು ಕೇಳಿ ಬಂದವು.