ಬೆಂಗಳೂರು :  ಹೌದು ನಾನು ಪೆದ್ದೀನೆ. ಆದರೆ, ನಾವು ಕಾಂಗ್ರೆಸ್‌ನವರಂತೆ ಬುದ್ಧಿವಂತರಲ್ಲ. ಆದರೆ, ಕಾಂಗ್ರೆಸ್‌ನವರು ತಮ್ಮ ಬುದ್ಧಿಯನ್ನು ರಾಜ್ಯ ಹಾಳು ಮಾಡುವುದಕ್ಕೆ ಬಳಸಿಕೊಳ್ಳುತ್ತಿದ್ದಾರೆ!

ಶೋಭಾ ಕರಂದ್ಲಾಜೆ ಪೆದ್ದಿ ಎಂಬ ಸಿದ್ದು ಹೇಳಿಕೆಗೆ ಸಂಸದೆ ತಿರುಗೇಟು ನೀಡಿದ್ದು ಹೀಗೆ. ಕರಾವಳಿಯವರಿಗೆ ತಿಳಿವಳಿಕೆ ಕಡಿಮೆ ಎಂದು ಮುಖ್ಯಮಂತ್ರಿ ಹೇಳುತ್ತಾರೆ, ನಾನು ಪೆದ್ದಿ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ನಾನು ಪೆದ್ದಿನೇ. ಆದರೆ ಕಾಂಗ್ರೆಸ್‌ನವರಂತೆ ನಾವು ಜಾತಿ, ಧರ್ಮ ಒಡೆಯಲ್ಲ ಎಂದು ಶೋಭಾ ಪರೋಕ್ಷ ಟಾಂಗ್‌ ನೀಡಿದರು.

ಸಿದ್ದರಾಮಯ್ಯ ಅವರು 10 ಕೆ.ಜಿ. ಅಕ್ಕಿ ಹೇಗೆ ಕೊಡುತ್ತಾರೆ ಎಂಬ ಸಂಸದೆ ಶೋಭಾ ಹೇಳಿಕೆಗೆ ಸಿದ್ದರಾಮಯ್ಯವ್ಯಂಗ್ಯವಾಡಿ, ಏಳು ಕೆ.ಜಿ. ಅಕ್ಕಿ ಕೊಟ್ಟವನಿಗೆ 10 ಕೆ.ಜಿ.ಕೊಡಲಿಕ್ಕಾಗಲ್ವಾ ಎಂದಿದ್ದು,  ಶೋಭಾ ಒಬ್ಬ ಪೆದ್ದಿ. ನಾನು ಈಶ್ವರಪ್ಪ ಅಥವಾ ಶೋಭಾ ಕರಂದ್ಲಾಜೆ ಹೇಳಿಕೆಗೆ ಉತ್ತರ ಕೊಡುವುದಿಲ್ಲ. ಇಂಥವರ ಬಗ್ಗೆ ನಾನು ಮಾತನಾಡದಿರುವುದೇ ಒಳಿತು ಎಂದು ಸಿದ್ದರಾಮಯ್ಯ ಹೇಳಿದ್ದರು. 

ಈ ಹೇಳಿಕೆಗೆ ಶೋಭಾ ತಿರುಗೇಟು ನೀಡಿದ್ದಾರೆ.