ಗಡ್ಕರಿ ಮೊದಲ ಚುನಾವಣೆ ಗೆದ್ದಿದ್ದು 2014ರಲ್ಲಿ

ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಮೊದಲ ಬಾರಿಗೆ ಚುನಾವಣೆಯೊಂದರಲ್ಲಿ ಗೆದ್ದಿದ್ದು 2014ರಲ್ಲಿ. 1989-2014ರವರೆಗೆ ಮಹಾರಾಷ್ಟ್ರ ವಿಧಾನಪರಿಷತ್ ಸದಸ್ಯರಾಗಿದ್ದ ಅವರು ಶಿವಸೇನೆ- ಬಿಜೆಪಿ ಸರ್ಕಾರದಲ್ಲಿ ಮಂತ್ರಿಯೂ ಆಗಿದ್ದರು. 1985ರಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದರಾದರೂ ಪರಾಭವಗೊಂಡಿದ್ದರು.

11 ಬಾರಿ ಗೆಲುವು: ಸೋಲಿಲ್ಲದ ಸರದಾರ ಖರ್ಗೆ

ಕಾಂಗ್ರೆಸ್ಸಿನ ಹಿರಿಯ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ‘ಸೋಲಿಲ್ಲದ ಸರದಾರ’ ಎಂದು ಕರೆಯಲಾಗುತ್ತದೆ. 1972ರಿಂದ ಈವರೆಗೆ ಸತತ 9 ಬಾರಿ ವಿಧಾನಸಭೆ ಹಾಗೂ ಸತತ 2 ಬಾರಿ ಲೋಕಸಭೆಗೆ ಆಯ್ಕೆಯಾಗಿರುವ ಅವರು ಒಮ್ಮೆಯೂ ಸೋಲು ಕಂಡವರಲ್ಲ

3626 ಪಕ್ಷಗಳು

ದೇಶದಲ್ಲಿರುವ ರಾಜಕೀಯ ಪಕ್ಷಗಳ ಒಟ್ಟಾರೆ ಸಂಖ್ಯೆ. ಆದರೆ ಈ ಪೈಕಿ ೧೮೪೧ ರಾಜಕೀಯ ಪಕ್ಷಗಳಿಗೆ ಮಾತ್ರ ಚುನಾವಣಾ ಆಯೋಗದ ಮಾನ್ಯತೆ ಇದೆ