ಶಿವಮೊಗ್ಗ(ಮಾ. 21)  ಸಂಘಟನೆ, ವೈಚಾರಿಕತೆ, ನೇತೃತ್ವ ಈ ಮೂರು ಅಂಶಗಳನ್ನು ಇಟ್ಟುಕೊಂಡು ಲೋಕಸಭಾ ಚುನಾವಣೆ ಎದುರಿಸುತ್ತೇವೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿ,  ವಿಧಾನ ಸಭೆಯ ಸ್ಪೀಕರ್ ರಮೇಶ್‌ ಕುಮಾರ್ ಬಗ್ಗೆ ತುಂಬಾ ಗೌರವ ಇದೆ. ಕಲಬುರಗಿ ಶಾಸಕ ಉಮೇಶ್ ಜಾಧವ್ ಸ್ವತಃ ಸ್ಪೀಕರ್ ಮನೆಗೆ ಹೋಗಿ ರಾಜೀನಾಮೆ ನೀಡಿ ಬಂದಿದ್ದಾರೆ. ಆದರೆ ಯಾಕೆ ರಾಜಿನಾಮೆ ಅಂಗೀಕಾರ ಮಾಡಲು ತಡ ಮಾಡ್ತಾ ಇದ್ದಾರೆ? ಎಂದು ಪ್ರಶ್ನೆ ಮಾಡಿದ್ದಾರೆ.

ಬೆಂಗಳೂರು ’ಉತ್ತರ’ ಕಾಂಗ್ರೆಸ್‌ಗೆ; ತುಮಕೂರಿನಿಂದ ದೇವೇಗೌಡ ಸ್ಪರ್ಧೆ?

ರಾಜೀನಾಮೆ ಅಂಗೀಕಾರ ಮಾಡಲು ಯಾವ  ಕಾರಣಕ್ಕಾಗಿ ತಡ ಮಾಡ್ತಾ ಇದ್ದಾರೆ ಅಂತ ತಿಳಿದರೆ ಅನುಕೂಲವಾಗುತ್ತದೆ. ಜನಸಾಮಾನ್ಯರು ಹೇಳುವ ಹಾಗೆ ಆಚಾರ ಹೇಳೋದ್ದಕ್ಕೆ ತಿನ್ನೋದು ಬದನೆಕಾಯಿ  ಅಂತ ಆಗುತ್ತದೆ ಎಂದು ಗಾದೆ ಮಾತು ಹೇಳಿದರು.

ನೀವು ಇಡಿ ದೇಶದ ಪುಸ್ತಕ ಓದಿ ಎಷ್ಟು ವರ್ಷ ಒದುತ್ತಿರೋ ಓದಿ ಯಾವಾಗ ರಾಜಿನಾಮೆ ಅಂಗೀಕಾರ ಮಾಡುತ್ತೀರಾ ಹೇಳಿ. ಸಭಾಧ್ಯಕ್ಷ ಸ್ಥಾನಕ್ಕೆ ಗೌರವ ಬರುವಂತೆ ಮಾಡಿ ಎಂದು ರಮೇಶ್ ಕುಮಾರ್ ಉದ್ದೇಶಿಸಿ ಹೇಳಿದರು.