Asianet Suvarna News Asianet Suvarna News

‘ಪಕ್ಷ ಗೆಲ್ಲಿಸಲಾಗದವರು ಮೋದಿ ಬಗ್ಗೆ ಟೀಕೆ ಮಾಡ್ತಾರೆ’ ಆಯನೂರು ಟಾಂಗ್!

ಶಿವಮೊಗ್ಗದಲ್ಲಿ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್  ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮೇಲೆ ವಾಗ್ದಾಳಿ ಮಾಡಿದ್ದಾರೆ.

BJP Leader Ayanur Manjunath Slams Former CM Siddaramaiah Shivamogga
Author
Bengaluru, First Published Apr 9, 2019, 5:32 PM IST

ಶಿವಮೊಗ್ಗ[ಏ. 09]  ಮಾಜಿ ಸಿಎಂ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಟೀಕೆ ಮಾಡುತ್ತಾರೆ. ಒಮ್ಮೆ ಮುಖ್ಯಮಂತ್ರಿ ಆಗಿ ಮುಂದಿನ ಟರ್ಮ್ ನಲ್ಲಿ ಪಕ್ಷವನ್ನ ಗೆಲ್ಲಿಸಲು ಸಾದ್ಯವಾಗಲಿಲ್ಲ ಸಿದ್ದರಾಮಯ್ಯನವರಿಗೆ. ಅಂತಹ ಅಸಮರ್ಥ ಮುಖ್ಯಮಂತ್ರಿ ಮೂರು ಬಾರಿ ಮುಖ್ಯಮಂತ್ರಿ ಹಾಗೂ ಪ್ರಧಾನ ಮಂತ್ರಿಯೂ ಆಗಿರುವ ನರೇಂದ್ರ ಮೋದಿಯವರ ಬಗ್ಗೆ ಏನು ಅರ್ಹತೆ ಇದೆ ಎಂದು ಶಿವಮೊಗ್ಗದಲ್ಲಿ ಎಂಎಲ್ಸಿ ಅಯನೂರು ಮಂಜುನಾಥ ಟೀಕಾ ಪ್ರಹಾರ ನಡೆಸಿದ್ದಾರೆ.

ದೇಶದಲ್ಲಿ ಆರ್ಥಿಕ ವಹಿವಾಟು ಹೆಚ್ಚಿಕೊಳ್ಳುವ ಬಗ್ಗೆ, ನಮ್ಮ ದೇಶದ ಸೈನಿಕರನ್ನ ಹೇಗೆ ನಡೆಸಿಕೊಳ್ಳುವ ಬಗ್ಗೆ ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ. ದೇಶಭಕ್ತಿಯನ್ನ ಪ್ರತಿಧ್ವನಿಸುವಂತೆ ಮಾಡಿರುವುದು ಪ್ರಧಾನಿ ಮೋದಿಗೆ ಸಲ್ಲುತ್ತದೆ. ಆರ್ಟಿಕಲ್ 370 ರದ್ದುಗೊಳಿಸಿ, ಒಂದು ದೇಶ ಒಂದು ಸಂವಿಧಾನ ತರಲಾಗುವುದು ಎಂದು ಬಿಜೆಪಿ ಈ ಹಿಂದೆ ಹೇಳಿತ್ತು. ಈಗಲೂ ಹೇಳಿದ್ದೇವೆ ಎಂದರು.

'ಪಾಕಿಸ್ತಾನದ ಪ್ರಧಾನಿ ಕೇಳಿ ನಾಮರ್ದ ಯಾರು ಗೊತ್ತಾಗುತ್ತದೆ'

ಕಾಶ್ಮೀರದಲ್ಲಿ ಇರುವ ಕಾನೂನೇ ಒಂದು ತರ, ಭಾರತದ ಸಂವಿಧಾನ ಬೇರೆ ಆಗಿತ್ತು . ಹಾಗಾಗಿ ಏಕರೂಪ ಕಾನೂನು ಜಾರಿಗೆ ತರಲಾಗುತ್ತದೆ. 1976 ರಲ್ಲಿ ಇಂದಿರಾಗಾಂಧಿ ಅಧಿಕಾರದಲ್ಲಿದ್ದಾಗ ಸೈನಿಕರಿಗೆ ವಿಶೇಷಾಧಿಕಾರ ನೀಡಲು ಹೋದಾಗ ಕೆಲವರು ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದರು. ಆದರೆ ಸುಪ್ರೀಂ ಕೋರ್ಟ್ ಸೈನ್ಯಕ್ಕೆ ಉತ್ತಮ ಸ್ಥಾನ ಮಾನ ನೀಡಬೇಕೆಂದಿತು. ಆದರೆ ಇಂದಿರಾಗಾಂಧಿ ಅವರು ತಂದ ಇಂತಹ ಅನುಕೂಲಕರವಾದ ಕಾನೂನನ್ನ ಅವರ ಸೊಸೆ, ಅವರ ಮೊಮ್ಮಗ ಹಾಗೂ ಮೊಮ್ಮಗಳು ಅದನ್ನ ತೆಗೆದು ಹಾಕಲು ಮುಂದಾಗಿರುವುದು ದುರಂತ ಎಂದು ವಿಷಾದ ವ್ಯಕ್ತಪಡಿಸಿದರು.

ನಗರವಾಲ್ ಹಗರಣ ನಡೆದಿದ್ದೆ ಇಂದಿರಾಗಾಂಧಿ ಕಾಲದಲ್ಲಿ. ಈ ಕಾಲದಲ್ಲಿ ಸೆಕ್ಯೂರಿಟಿ ಇಲ್ಲದೆ ಬ್ಯಾಂಕ್ ನಿಂದ ಹಣ ಪಡೆದು ದೇಶ ಬಿಡುವ ಸ್ಥಿತಿ ಉದ್ಭವವಾಗಿದ್ದೆ ಇಂದಿರಾಗಾಂಧಿ ಕಾಲದಲ್ಲಿ ಆಗಿತ್ತು. ಅಂತಹ ಬ್ಯಾಂಕ್ ಕರಪ್ಟ್ ಪ್ರಕರಣ ಇಂದಿಗೂ ಮುಂದುವರೆದಿದೆ ಎಂದು ಹೇಳಿದರು.

 

Follow Us:
Download App:
  • android
  • ios